ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದ ಪ್ರತಿಜ್ಞೆ ವಿಧಿ ಬೋಧನೆ
ರಾಯಚೂರು ಜಿಲ್ಲೆಯ, ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ಆಂಜನೇಯ ಗುಡಿ ಹತ್ತಿರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯಡಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಗ್ರಾಮದ ಎಲ್ಲಾ ಬೀದಿಗಳಲ್ಲಿ ಜಾಥಾ ಮಾಡಲಾಯಿತು, ನಂತರ ಕಡ್ಡಾಯವಾಗಿ ಮತದಾರರು ಮೇ ೧೦ ರಂದು ನಡೆಯುವ ಮತದಾನದಲ್ಲಿ ತಪ್ಪದೆ ಮತಚಲಾಯಿಸುವಂತೆ ತಿಳಿ ಹೇಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ISRA ತಂಡದ ಶಾಂತಮತ್ತಯ್ಯ, ಮಾತನಾಡಿ ಕಳೆದ ಬಾರಿ 65% ಮಾತ್ರ ಮತದಾನ ಆಗಿದ್ದು ಅದನ್ನು ನಾವು ಎಲ್ಲರು ಸೇರಿ ಈ ಬಾರಿ ಅತಿ ಹೆಚ್ಚು ಮತದಾನ ಆಗಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ, ಎಲ್ಲಾ ಜನರು ಖಡ್ಡಾಯವಾಗಿ *ನಮ್ಮ ಮತ ನಮ್ಮ ಹಕ್ಕು* ಎನ್ನುವ ಧ್ಯೇಯ ವಾಕ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿಯ PDO ಶ್ರೀಮತಿ ದೀಪಾ, ಸಿಬ್ಬಂದಿಗಳಾದ ಅಮರೇಶ್, ಮತ್ತು ನೀರು ಗಂಟಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ರಿಪೋರ್ಟರ್ : ಮೆಹಬೂಬ ಮೋಮಿನ