Koppal : ಕೊಪ್ಪಳ ತಾ.ಪಂ ಆವರಣದಲ್ಲಿ ಅಣುಕು ಮತದಾನ ಕೇಂದ್ರ ಉದ್ಘಾಟನೆ

ಇವಿಎಂ, ವಿವಿ ಪ್ಯಾಟ್ ಬಳಕೆಯ ಕುರಿತು ಜಾಗೃತಿ ಹೆಚ್ಚಾಗಲಿ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗು ಜಿ. ಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಭಿಮತ

 ಕೊಪ್ಪಳ ತಾ.ಪಂ ಆವರಣದಲ್ಲಿ ಅಣುಕು ಮತದಾನ ಕೇಂದ್ರ ಉದ್ಘಾಟನೆ 

 ಕೊಪ್ಪಳ:- ಮತದಾರರಿಗೆ ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತು‌ ಹೆಚ್ಚು ಹೆಚ್ಚು ಜಾಗೃತಿ‌ ಮೂಡಿಸಲು ಕ್ರಮವಹಿಸಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗು ಜಿ. ಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಕರೆ ನೀಡಿದರು.

 ದಿನಾಂಕ:11-04-2023ರಂದು ಕೊಪ್ಪಳ ತಾಲೂಕ ಪಂಚಾಯತ ಆವರಣದಲ್ಲಿ ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತು ಅಣುಕು ಮತದಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನಾನಾ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾರರರ ಗಮನಸೆಳೆಯಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದೆ. ಅದನ್ನು ವಿವೇಚನಾಯುಕ್ತವಾಗಿ ಅರ್ಹರಿಗೆ ಕಡ್ಡಾಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು. ಹೊಸದಾಗಿ ನೊಂದಣಿಯಾದ ಯುವ ಮತದಾರರಿಗೆ ಅನುಕೂಲವಾಗಲಿದೆ.18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತಚಲಾಯಿಸಬೇಕು. ಈ‌ ರೀತಿಯ ಅಣುಕು‌ ಮತದಾನ ಕೇಂದ್ರಗಳಿಂದ ಇವಿಎಂ, ವಿವಿ ಪ್ಯಾಟ್ ಗಳ ಬಗ್ಗೆ ಸಾರ್ವಜನಿಕರಲ್ಲಿರುವ  ಗೊಂದಲಗಳು‌‌ ಕಡಿಮೆಯಾಗುತ್ತವೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು, ತಾಲೂಕ ಯೋಜನಾಧಿಕಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ನರೇಗಾ ಸಹಾಯಕ‌ ನಿರ್ದೇಶಕರು, ತಾಲೂಕ‌ ಸ್ವೀಪ್ ತಂಡದ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಹಾಗೂ ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">