UUCMS ಅನುಷ್ಠಾನ ಕಡ್ಡಾಯಗೊಳಿಸುವ ಉನ್ನತ ಶಿಕ್ಷಣ ಇಲಾಖೆಯ ಆದೇಶ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ!! : AIDSO ಖಂಡನೆ

UUCMS ಅನುಷ್ಠಾನ ಕಡ್ಡಾಯಗೊಳಿಸುವ ಉನ್ನತ ಶಿಕ್ಷಣ ಇಲಾಖೆಯ ಆದೇಶ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ!! : AIDSO ಖಂಡನೆ 

UUCMS ಪೋರ್ಟಲ್ ಬಂದಾಗಿನಿಂದಲೂ ಅದು ಹಲವಾರು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಉನ್ನತ ಶಿಕ್ಷಣ ಇಲಾಖೆಯೆ ನೇರ ಹೊಣೆ. ಮೊದಲಿನಿಂದಲೂ UUCMS ದೋಷಪೂರಿತವಾಗಿಯೆ ಇತ್ತು ಮತ್ತು ಆ ಕಾರಣದಿಂದ ಪರೀಕ್ಷೆಗಳು ಮತ್ತು ಫಲಿತಾಂಶಗಳು ವಿಳಂಬವಾಗಿತ್ತು ಮತ್ತು ಶೈಕ್ಷಣಿಕ ವರ್ಷವೇ 6 ತಿಂಗಳಷ್ಟು ಕಾಲ ವಿಳಂಬವಾಗಿತ್ತು. ಈಗ ಏಕಾಏಕಿ ಎಲ್ಲ ಕಾಲೇಜುಗಳು UUCMS ಅನ್ನು ಅಳವಡಿಸಲೇಬೇಕು, ಹಾಗೆ ಮಾಡದ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ನೀಡಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. UUCMS ಪೋರ್ಟಲ್ ಅನ್ನು ಒದಗಿಸಬೇಕಾದರೆ, ಅದರ ಅನುಷ್ಠಾನ ಹೇಗೆ, ಸವಾಲುಗಳು ಏನು ಮತ್ತು ತೊಂದರೆಗಳು ಏನು ಇವೆಲ್ಲವನ್ನೂ ಕೂಲಂಕುಷವಾಗಿ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಮಾಡಬೇಕಿತ್ತು, ಆದರೆ ವಾಸ್ತವದಲ್ಲಿ ಅದು ಸಾಕಷ್ಟು ಬಿಕ್ಕಟ್ಟುಗಳನ್ನು ತಂದಿತೆ ವಿನಃ ಪೋರ್ಟಲ್ ನ ಕೆಲಸ ಸರಾಗವಾಗಿ ನಡೆದಿರಲಿಲ್ಲ ಎಂಬ ಸತ್ಯಾಂಶ ಎಲ್ಲರಿಗೂ ತಿಳಿದಿದೆ.  
ಈಗ UUCMS ಕಡ್ಡಾಯ ಅನುಷ್ಠಾನ ಮಾಡಲೇಬೇಕು ಎಂದು ಆದೇಶ ನೀಡಿರುವ ಉನ್ನತ ಶಿಕ್ಷಣ ಇಲಾಖೆಯು, ಈ ಮೇಲೆ ಗುರುತಿಸಲಾಗಿರುವ ಸಮಸ್ಯೆಗಳನ್ನು ಬಗೆಹರಿಸಿದೆಯೆ? ಅದಕ್ಕೆ ಸೂಕ್ತ ಪರಿಹಾರ ನೀಡಿದೆಯೇ? ಯಾವುದೇ ತಾಂತ್ರಿಕ  ದೋಷವಿಲ್ಲದ ಪೋರ್ಟಲ್ ಸಿದ್ಧವಾಗಿದೆಯೆ? ಮತ್ತು ಆ ಪೋರ್ಟಲ್ ಅನ್ನು ಬಳಸಲು ನುರಿತ ತಂತ್ರಜ್ಞರನ್ನು ನೇಮಕ ಮಾಡಲಾಗಿದೆಯೆ? ಇದು ವಿದ್ಯಾರ್ಥಿಗಳನ್ನು ಮತ್ತು ಕಾಲೇಜು ಸಿಬ್ಬಂದಿಗಳನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರಿಸದೆ, ಕಡ್ಡಾಯ ಅನುಷ್ಠಾನ ಎಂಬುದು ಸರ್ವಾಧಿಕಾರಿ ಧೋರಣೆ ಮತ್ತು ಅದು ಮತ್ತಷ್ಟು ತೊಂದರೆಗಳಿಗೆ ಎಡೆ ಮಾಡಿಕೊಡುತ್ತದೆ. ಪೋರ್ಟಲ್ ಅನುಷ್ಠಾನ ಕಡ್ಡಾಯ ಮಾಡಿದ ನಂತರ ಒಬ್ಬನೇ ವಿದ್ಯಾರ್ಥಿಯೂ ತಾಂತ್ರಿಕ ದೋಷದ ನೆಪದಲ್ಲಿ ಪೋರ್ಟಲ್ ಬಳಸಲು ಆಗದಿದ್ದರೆ ಆದರ ನೇರ ಹೊಣೆ ಉನ್ನತ ಶಿಕ್ಷಣ ಇಲಾಖೆಯದ್ದೆ ಆಗಿರುತ್ತದೆ. 

ಹಾಗಾಗಿ, UUCMS ಪೋರ್ಟಲ್ ಅನ್ನು ಕಡ್ಡಾಯ ಅನುಷ್ಠಾನ ಮಾಡಬೇಕು ಎನ್ನುವ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಓ ಆಗ್ರಹಿಸಿದೆ.
Previous Post Next Post

Contact Form

f="https://unpkg.com/video.js/dist/video-js.css" rel="stylesheet">