ಸಾಗವಾನಿಗಾಗಿ ಎರಡು ಕುಟುಂಬಗಳ ಮದ್ಯೆ ಮಾರಾ ಮಾರಿ, ಪೊಲೀಸ್ ರಕ್ಷಣೆ ಕೋರಿದ ಗಾಯಾಳು
ಬೈಲಹೊಂಗಲ- ಎರಡು ಕುಟುಂಬಗಳ ಮಧ್ಯೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಮಾರಾಮಾರಿವಾದ ಘಟನೆ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಮೇ 23 ರಂದು ನಡೆದಿತ್ತು.
ಗ್ರಾಮದ ಮಹಾರುದ್ರಪ್ಪ ಬಸವಂತಪ್ಪ ಕುಂಬಾರ (45), ರಮೇಶ ಶಿವಪ್ಪ ಕುಂಬಾರ (23), ಶಿವಾನಂದ ಮಹಾರುದ್ರಪ್ಪ ಕುಂಬಾರ (24) ಲಕ್ಷ್ಮೀ ಮಹಾರುದ್ರಪ್ಪ ಕುಂಬಾರ (37) ಇವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿತರು 6 ಜನ ಸೇರಿಕೊಂಡು ಏಕಾಏಕಿ ಮನೆಗೆ ನುಗ್ಗಿ ಬಡಿಗೆ. ಕುಡಗೋಲಿನಿಂದ ತಲೆಗೆ, ಭುಜಕ್ಕೆ ಹೊಡೆದು ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಯೆಮಾಡಿ ಪರಾರಿಯಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಎರಡು ಕುಟುಂಬಗಳ ಮಧ್ಯ ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ.
ಆಸ್ತಿ ವಿವಾದ ಕುರಿತು ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೇಯಾಗಿದ್ದು ಅವರಿಂದ ನಮಗೆ ಜೀವ ಬೆದರಿಕೆ ಇದ್ದು ನಮಗೆ ಪೊಲೀಸ ರಕ್ಷಣೆ ಒದಗಿಸಬೇಕೆಂದು ಪಬ್ಲಿಕ ನೆಕ್ಷ್ಟಗೆ ಮನವಿ ಮಾಡಿದರು.
ಘಟನೆ ಹಿನ್ನಲೆ- ಮಹಾರುದ್ರಪ್ಪ ಕುಂಬಾರ ಹಾಗೂ ಶಂಕರೆಪ್ಪ ಕುಂಬಾರ ಕುಟುಂಬಗಳ ಮಧ್ಯೆ ಜಮೀನು ವಿವಾದವಿತ್ತು. ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದ ಕುರಿತು ವಿವಾದ ಉಂಟಾಗಿತ್ತು. ನ್ಯಾಯಲಯದ ತೀರ್ಪ ಬಂದ ನಂತರ ನಿಮ್ಮ ಪಾಲಿನ ಗಿಡಗಳನ್ನು ಕಡಿಯಬೇಕು ಎಂದು ವಾದ ವಿವಾದ ನಡೆದು ಜಗಳವಾಗಿ ಮೇ. 2 ರಂದು ಬೈಲಹೊಂಗಲ ಪೊಲೀಸ್ ಠಾಣೆಗೆ ದೂರುದಾಖಲಾಗಿತ್ತು. ಕಡಿದ ಸಾಗುವಾನಿ ಮರಗಳನ್ನು ಒಯ್ಯಲು ಬಂದಾಗ ಈ ಘಟನೆ ನೆಡಯಿತು ಎನ್ನಲಾಗಿದೆ.