ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಅಮಾನುಷ ಸಂಶಯಾತ್ಮಕ ಕೊಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಶನಾತ್ಮಕ ಅಸಹಜ ಸಾವಿನ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮೂಲಗಳು ತಿಳಿಸಿವೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂಎ ನಟರಾಜ್ ಘಟನೆಯ ಬಗ್ಗೆ ತಿಳಿಸಿದ್ದಾರೆ
ಸ್ಥಳೀಯ ಅಂಚೆ ಇಲಾಖೆಯಲ್ಲಿ ಗುತ್ತಿಗೆದಾರನಾಗಿದ್ದ ನೌಕರ 52 ವರ್ಷದ ಗೋವಿಂದ 2023ರ ಏಪ್ರಿಲ್ 30ರಂದು ಮೃತಪಟ್ಟಿದ್ದು ಈ ಘಟನೆ ಮೇಲ್ನೋಟಕ್ಕೆ ಸಹಜ ಸಾವು ಎಂದು ಬಿಂಬಿಸಲಾಗುತ್ತಿದೆ. ಆದರೆ ಇದೊಂದು ಅಸಹಜ ಸಾವಾಗಿದ್ದು ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತ ವ್ಯಕ್ತಿಯ ಸಹೋದರ ಕೃಷ್ಣ ಎನ್ನುವಾತ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ದೂರಿನ ಹಿನ್ನೆಲೆ ಮಿಮ್ಸ್ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು ಮೃತ ದೇಹದ ಮೇಲೆ ಸಂಶಯಾತ್ಮಕ ಗಾಯಗಳು ಕಂಡುಬಂದಿದ್ದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಿದ್ದಿದೆ.
ಕಟ್ಟಿಗೆಯಿಂದ ಹಲ್ಲೆ ಮಾಡಿ ಕುತ್ತಿಗೆ ತಿರುವಿದ್ದಾಗಿ ಮೃತ ಗೋವಿಂದನ ಪತ್ನಿ ಜಿ.ಕೆ.ರೇವತಿ ಪುತ್ರ ಜಿ.ಕೆ. ಪವನ್ ಇಬ್ಬರು ಸೇರಿ ಹತ್ಯೆಗೈದಿರುವುದನ್ನ ಒಪ್ಪಿಕೊಂಡಿದ್ದು ಇಬ್ಬರು ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಅಧೀಕ್ಷಕರಾದ ಎಂ.ಎ ನಟರಾಜ್ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವರದಿ : ಚನ್ನಕೇಶವ