JDS : ಅಭಿವೃದ್ಧಿ ವಿರೋಧಿ ಶಾಸಕರಿಗೆ ತಕ್ಕ ಪಾಠ ಕಲಿಸಿ: CVC


ಅಭಿವೃದ್ಧಿ ವಿರೋಧಿ ಶಾಸಕರಿಗೆ ತಕ್ಕ ಪಾಠ ಕಲಿಸಿ: CVC

ಕೊಪ್ಪಳ,: ಕೆಲವೊಂದು ಪ್ರದೇಶಗಳಿಗೆ ಹೋಗಲು ರಸ್ತೆಗಳೇ ಇಲ್ಲ. ಅಲ್ಲಿನ ಪರಸ್ಥಿತಿ ಅತ್ಯಂತ ಹೀನಾಯವಾಗಿದೆ. ಅಲ್ಲಿ ಶೌಚಾಲಯ, ಒಳ ಚರಂಡಿ ಹಾಗೂ

ಕಸ ವಿಲೆವಾರಿ ವ್ಯವಸ್ಥೆ ಇಲ್ಲವೇ ಇಲ್ಲ. ಕಳೆದ ಮೂರು ದಶಕಗಳಿಂದ ಕೊಪ್ಪಳ ಕ್ಷೇತ್ರವನ್ನು ಆಳಿದ ಶಾಸಕರು ಅಂತಹ ವಾರ್ಡ್ಗಳ ಮತದಾರರ ಮತ ಪಡೆದ ನಂತರ ವಾರ್ಡ್ಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಅಲಕ್ಷಿಸಿದ್ದಾರೆ. ಆ ವಾರ್ಡ್ಗಳ ಮತದಾರರು ಅಭಿವೃದ್ಧಿ ವಿರೋಧಿ ಶಾಸಕರಿಗೆ ತಕ್ಕ ಪಾಠ ಕಲಿಸಲೇಬೇಕು, ಎಂದು ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಹೇಳಿದರು.

ಅವರು ನಗರದ ವಾರ್ಡ್ 4, 17, 18 ಹಾಗೂ ಇತರೆ ವಾರ್ಡ್ಗಳಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮತ ಹಾಕಿ ನಿಮ್ಮ ಕೈಗಳು ಸೋತು ಹೋಗಿವೆಯೇ ಹೊರತು ನಿಮ್ಮ ವಾರ್ಡ್ಗಳು ಅಭಿವೃದ್ಧಿಯಾಗಿಲ್ಲ. ನೀವು ಮತ್ತೊಮ್ಮೆ ಅವರನ್ನೇ

ಚುನಾಯಿಸಿದರೆ ನಿಮ್ಮ ಹಾಗೂ ನಿಮ್ಮ ವಾರ್ಡ್ಗಳ ಅಭಿವೃದ್ಧಿ ಸಾಧ್ಯವೇ ಇಲ್ಲ. ದಯವಿಟ್ಟು ಶಾಸಕರ ಬಣ್ಣದ ಮಾತಿಗೆ ಮರುಳಾಗಬೇಡಿ. ಈಗ ನಿಮಗೊದಿಗಿ ಬಂದಿರುವ ಅವಕಾಶ ಮತ್ತೆ ಬರವುದಿಲ್ಲ ಎಂದರು. ನೀವು ನನಗಿರುವ ಅವಕಾಶ ತಪ್ಪಿಸಬಹುದು. ಆದರೇ, ಭಗವಂತ ನನಗೆ ನೀಡುವ ಅವಕಾಶವನ್ನು ನಿಮಗೆ ತಪ್ಪಿಸಲು ಸಾಧ್ಯವೇ ಇಲ್ಲ. ನೀವು ನನ್ನನ್ನು ಎತ್ತು ನೆಲಕ್ಕೆ ಎಸೆಯಬಹುದು. ಆದರೇ ನಾನು ಪುಟಿದೆದ್ದು ಬಂದೇ ಬರುತ್ತೇನೆ. ಏಕೆಂದರೆ ಮತದಾರರ ಆಶೀರ್ವಾದ ನನಗಿದೆ ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.

ಎರಡೂ ಕುಟುಂಬಗಳಿಗೂ ಸರಿಯಾದ ಪಾಠ ಕಲಿಸುವ ಅವಕಾಶ ಬಂದಿದೆ. ನಮಗೆ ಬೇಕಾಗಿರುವುದು ಹೊಂದಾಣಿಕೆ ರಾಜಕಾರಣವಲ್ಲ, ಗುಡಿಸಿಲು ಮುಕ್ತ ಕಾಲೋನಿಗಳು. ಕಾಂಗ್ರೆಸ್ ಪಕ್ಷ ಮುಸ್ಲಿಂ ಬಾಂಧವರನ್ನು ಒತ್ತೆಯಾಳುಗಳಂತೆ ಹಾಗೂ ಜೀತದಾಳುಗಳಂತೆ ನೋಡಿಕೊಂಡಿದೆ. ಆ ಪಕ್ಷಕ್ಕೆ ಬೇಕಾಗಿರುವುದು ಮುಸ್ಲಿಂ ಸಮುದಾಯದ ಮತಗಳು.

ಆ ಸಮುದಾಯದ ಅಭಿವೃದ್ಧಿಯಾಗಿಲ್ಲ, ಎಂದು ಟೀಕಾ ಪ್ರಹಾರ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಸುರೇಶ ಭೂಮರಡ್ಡಿ, ಚೆನ್ನಪ್ಪ ಕೋಟ್ಯಾಳ್,ಮೌನೇಶ್ ಕರಾಟೆ, ಡಾ. ಮಹೇಶ ಗೊವನಕೊಪ್ಪ, ಡಾ. ಮಹೇಂದ್ರ ಕಿಂದ್ರೆ,  ಮಂಜುನಾಥ ಸೊರಟೂರ್, ಮೆಹಮೂದ ಹುಸೇನ್, ಖಾಜಾವಲಿ ಬನ್ನಿಕೊಪ್ಪ ಸೇರಿದಂತೆ ಇತರರು ಇದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">