JDS : ಜೆ.ಡಿ.ಎಸ್ ಪಕ್ಷದ ಹೋಬಳಿ ಯುವ ಘಟಕದ ಅದ್ಯಕ್ಷರಾಗಿ ಕಡಹೆಮ್ಮಿಗೆ ವೆಂಕಟೇಶ್ ರವರು ನೇಮಕ


ಜೆ.ಡಿ.ಎಸ್ ಪಕ್ಷದ ಹೋಬಳಿ ಯುವ ಘಟಕದ ಅದ್ಯಕ್ಷರಾಗಿ ಕಡಹೆಮ್ಮಿಗೆ ವೆಂಕಟೇಶ್ ರವರು ನೇಮಕ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಯುವ ಘಟಕದ ಅದ್ಯಕ್ಷರ ಸ್ಥಾನವನ್ನು  ಕಡಹೆಮ್ಮಿಗೆ ಗ್ರಾಮದ ಹಾಲುಮತ ಸಮಾಜದ ವೆಂಕಟೇಶ್, ಉಪಾದ್ಯಕ್ಷರಾಗಿ ಕಿಕ್ಕೇರಿ ಪಟ್ಟಣದ ಅನಂತ, ಮತ್ತು ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಬಾರೆ ಮಂಜು ರವರಿಗೆ ಅಧಿಕೃತವಾಗಿ ರಾಜ್ಯ ವಕ್ತಾರರು ಮತ್ತು ತಾಲ್ಲೂಕು ಯುವ ಘಟಕದ ಅದ್ಯಕ್ಷ ಆಶ್ವಿನ್ ಕುಮಾರ್ ನೇಮಕಾತಿ ಆದೇಶ ನೀಡಿದ್ರು..

ನಂತರ ಮಾತನಾಡಿ  ಜೆ ಡಿ ಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮೆಲ್ಲರ  ಗುರಿಯಾಗಿರಬೇಕು  ನಮ್ಮ  ಕ್ಷೇತ್ರದ ಅಭ್ಯರ್ಥಿಯಾದ ಹೆಚ್ ಟಿ ಮಂಜು ತಾಲ್ಲೂಕಿನ‌ ಜನತೆಯ ಮನದಲ್ಲಿದ್ದು  ಎಲ್ಲಾ ವರ್ಗದ ಜನತೆಯ ಕಷ್ಟ ಸುಖಗಳಿಗೆ ಸ್ಪದಿಸುತ್ತಾ ಬಂದಿದ್ದಾರೆ ಇನ್ನೂ  ಚುನಾವಣೆಗೆ ಇನ್ನ ಎರಡು ದಿನಗಳೇ ಬಾಕಿ ಇರೋದು ತಾವುಗಳು ಜೆ.ಡಿ.ಎಸ್ ಅಭ್ಯರ್ಥಿ ಪರ  ಪ್ರಚಾರ ನೆಡೆಸಿ ಎಚ್ಚು  ಮತಗಳ ಅಂತರದಿಂದ ಗೆಲ್ಲಿಸಲು ಹಗಲಿರುಳು ಶ್ರಮಿಸುವಂತೆ ಸಲಹೆ ನೀಡಿದ್ರು..

ಈ ಸಂದರ್ಭದಲ್ಲಿ ಕಿಕ್ಕೇರಿ ಹೋಬಳಿ ಅದ್ಯಕ್ಷ ಕಾಯಿ ಮಂಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್, ಎ.ಪಿ.ಎಂ‌. ಸಿ ಮಾಜಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ್ರು, ಆನೆಗೊಳ ಗ್ರಾಮ ಪಂಚಾಯತಿ ಮಾಜಿ ಉಪಾದ್ಯಕ್ಷ ಕಡೆಹೆಮ್ಮಿಗೆ ರಮೇಶ್ ಸೇರಿದಂತೆ ಮತ್ತಿತ್ತರರು ಇದ್ದರು..


ವರದಿ : ಶಂಭು ಕಿಕ್ಕೇರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">