ಹಾಲಪ್ಪ ಆಚಾರ್ ಗೆ ಬೆಂಬಲ ಘೋಷಿಸಿದ ರಾಜ್ಯ ರೈತ ಸಂಘ ಹಸಿರು ಸೇನೆ
ಕುಕನೂರು : ರಾಜ್ಯ ರೈತ ಸಂಘ ಹಸಿರು ಸೇನೆ ( ವಿ ಆರ್ ನಾರಾಯಣ ರೆಡ್ಡಿ ಬಣ ) ತಾಲೂಕು ಘಟಕವು ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಗೆ ತನ್ನ ಬೆಂಬಲ ಘೋಷಿಸಿದೆ.
ಇಂದು ಸೋಮವಾರ ಮಸಬಹಂಚಿನಾಳ್ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ,ಸಚಿವ ಹಾಲಪ್ಪ ಅವರನ್ನು ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು, ಮುಖಂಡರು ಸ್ಥಳೀಯವಾಗಿ ಜನಸಾಮಾನ್ಯರು, ರೈತರಿಗೆ ಲಭ್ಯವಾಗುವ, ಎಲ್ಲ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುವ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರಿಗೆ ರೈತ ಸಂಘ ತನ್ನ ಬೆಂಬಲ ಘೋಷಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಬಸವರಾಜ್ ಕೊಡ್ಲಿ ಮಾತನಾಡಿ, ಸ್ಥಳೀಯ ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ,ಬೀಜ ಗೊಬ್ಬರ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ, ಕೆರೆ ತುಂಬಿಸುವ ಮೂಲಕ ನೀರಾವರಿ ಗಾಗಿ ಶ್ರಮಿಸುತ್ತಿದ್ದಾರೆ, ಜೊತೆಗೆ ಕ್ಷೇತ್ರದಲ್ಲೇ ನೆಲೆಸಿರುವುದರಿಂದ ರೈತರ ಸಂಕಷ್ಟಗಳಿಗೆ ಸದಾ ನೇರವಾಗುತ್ತಾರೆ ಹೀಗಾಗಿ ರೈತ ಸಂಘ ಹಸಿರು ಸೇನೆ ಯು ಹಾಲಪ್ಪ ಆಚಾರ್ ಅವರಿಗೆ ಬೆಂಬಲಿಸುವ ನಿರ್ಧಾರ ಕೈಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ಮಂಜುನಾಥ್ ಚೆಟ್ಟಿ, ಗುಳನಗೌಡ ಪೊಲೀಸ್ ಪಾಟೀಲ್, ಹುಚ್ಚಿರಪ್ಪ ಕೌದಿ, ಲಕ್ಷ್ಮಣ್ ಕೋರಿ, ಬಸಪ್ಪ ಮಂಡಲಗೇರಿ, ಮಲ್ಲಿಕಾರ್ಜುನ ಪಾಟೀಲ್, ರೇಣಮ್ಮ ಬಿನ್ನಾಳ್, ಸಾವಿತ್ರಮ್ಮ ತೆಗ್ಗಿನಮನಿ, ರಾಜೀವ್ ಮಡಿವಾಳರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ