Vanasiri: ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಸಮಾರಂಭ


ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಸಮಾರಂಭ

ವನಸಿರಿ ಫೌಂಡೇಶನ್(ರಿ).ರಾಜ್ಯ ಘಟಕ ರಾಯಚೂರು ವತಿಯಿಂದ ಹಲವಾರು ವರ್ಷಗಳಿಂದ ಕಲ್ಯಾಣ ಕರ್ನಾಟಕದಾದ್ಯಂತ ಸಸಿಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದೇವೆ ಇದರ ಜೊತೆಗೆ ಸಾರ್ವಜನಿಕರಿಗೂ ಪರಿಸರ ಜಾಗೃತಿ ಮೂಡಿಸುತ್ತಿದ್ದೇವೆ.ಇತ್ತೀಚೆಗೆ ಒಂದು ವರ್ಷದ ಹಿಂದೆ ಸಿಂಧನೂರಿನ ಏಳುರಾಗಿ ಕ್ಯಾಂಪ್ ನಲ್ಲಿ ರತನೋರ್ವ ಕಡಿದು ಹಾಕುದ ಹಾಲದ ಮರವನ್ನು ನಮ್ಮ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಆ ಮರವನ್ನು ರಸ್ತೆಯಲ್ಲಿ ಜೇಸಿಬಿ ಮೂಲಕ ಸುಮಾರು 5ಗಂಟೆಗಳ ಕಾಲ ವಾಹನದಲ್ಲಿ ತಂದು ಸಿಂಧನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ನೆಡಲಾಯಿತು.ಇದಕ್ಕೆ ಹಲವಾರು ಪೋಲಿಸ್ ಸಿಬ್ಬಂದಿಗಳು, ನೀರಾವರಿ ಇಲಾಖೆ ಅಧಿಕಾರಿಗಳು, ವನಸಿರಿ ತಂಡದ ಸದಸ್ಯರು,ಸಾರ್ವಜನಿಕರು, ಪರಿಸರ ಪ್ರೇಮಿಗಳು ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ನೀಡಿದರು. ಸದ್ಯ ಇದೀಗ ಈ ಆಲದ ಮರವನ್ನು ನೆಟ್ಟು ಒಂದು ವರ್ಷಗಳು ಕಳೆಯುತ್ತಿದೆ.ಈ ಒಂದು ವರ್ಷದಲ್ಲಿ ಆಲದ ಮರ ಚಿಗುರೊಡೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.ಈ ಮರವನ್ನು ವೀಕ್ಷಿಸಲು ಕೊಪ್ಪಳದ ಗವಿಶ್ರೀ ಗಳು, ಜಿಲ್ಲೆಯ ಸಚಿವರು, ಶಾಸಕರು,ಅಧಿಕಾರಿಗಳು, ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ವನಸಿರಿ ತಂಡಕ್ಕೆ ಹರ್ಷವೆನಿಸುತ್ತಿದೆ.ಇದಕ್ಕೆ ನಮ್ಮ ವನಸಿರಿ ಫೌಂಡೇಶನ್ ವತಿಯಿಂದ ವಾರ್ಷಿಕೋತ್ಸವ ಸಮಾರಂಭದ ಮಾಡಲು ಮುಂದಾಗಿದ್ದೇವೆ ಇದೇ ಶುಕ್ರವಾರ ಬೆಳಗ್ಗೆ 10ಗಂಟೆಗೆ ಆಲದ ಮರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಆಚರಿಸಲಾಗುತ್ತದೆ. ರಾಯಚೂರು ಜಿಲ್ಲೆಯ ಸಮಸ್ತ ಪರಿಸರ ಪ್ರೇಮಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ವನಸಿರಿ ಫೌಂಡೇಶನ್ ಮಹಿಳಾ ಘಟಕದ ಜಿಲ್ಲಾದ್ಯಕ್ಷರಾದ ಸಂಗೀತ ಸಾರಂಗ ಮಠ ಅವರು ಸಿಂಧನೂರು ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಮನವಿ ಮಾಡಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">