ಜಿಪಂ ಸಿಇಒ ರವರಿಂದ ಕೊಪ್ಪಳ ತಾಲೂಕಿನಲ್ಲಿ ವಿವಿಧ ಯೋಜನೆಗಳ ಪರಿಶೀಲನೆ
ನರೇಗಾ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆಯಲ್ಲಿ ಭಾಗಿಯಾದ ಸಿಇಒ
ಕೊಪ್ಪಳ: ತಾಲೂಕಿನ ಬಿ ಹೊಸಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಸ್ಥಳಕ್ಕೆ ಜಿ.ಪಂ ಸಿಇ ರಾಹುಲ್ ರತ್ನಂ ಪಾಂಡೆಯ ಭೇಟಿ ನೀಡಿದರು.
ಬಹದ್ದೂರಬಂಡಿ, ಹೊಸಹಳ್ಳಿ, ಹುಲಿಗಿ, ಹಿಟ್ನಾಳ ಗ್ರಾಮ ಪಂಚಾಯತಿಯ ನರೇಗಾ ಕೂಲಿಕಾರರ ಜೊತೆಗೆ ಚರ್ಚಸಿದರು. ಆರೋಗ್ಯ ಬಗ್ಗೆ ಪ್ರತಿಯೊಬ್ಬರು ವೈಯಕ್ತಿಕ ಗಮನಹರಿಸಬೇಕು. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಯಲ್ಲಿ ಬಿಪಿ,ಶುಗರ್, ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಕುರಿತು ಮಾತ್ರೆಗಳನ್ನು ವಿತರಿಸಲಾಗುತ್ತದೆಂದು ಮಾಹಿತಿ ನೀಡಿದರು.
ನಂತರ ಕೂಲಿಕಾರರು ಕೆಲಸ ನಿರ್ವಹಿಸುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕೂಲಿ ಹಣ ಪಾವತಿ, ಆರೋಗ್ಯ ತಪಾಸಣೆ, ಕೂಲಿ ಕೆಲಸ ನೀಡಿಕೆ ಕುರಿತು ಚರ್ಚಿಸಿದರು.
ಮಕ್ಕಳೊಂದಿಗೆ ಕೆರಂ ಆಟವಾಡಿ ಖುಷಿ ಪಟ್ಟ ಸಿಇಒ
ಹಿರೇಸಿಂಧೊಗಿ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಜರುಗುತ್ತಿರುವ ಬೇಸಿಗೆ ಶಿಬಿರಕ್ಕೆ ಮಾನ್ಯರು ಭೇಟಿ ನೀಡಿ ಮಕ್ಕಳೊಂದಿಗೆ ಕೆರಂ ಆಟ ಅಡಿ ಖುಷಿಪಟ್ಟರು. ಕಂಪ್ಯೂಟರ್ ಬಳಕೆಯಾಗುತ್ತಿರುವ ಬಗ್ಗೆ ಮಕ್ಕಳಿಂದ ಪರಿಶೀಲಿಸಿದರು.
ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸುತ್ತಿರುವ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ :-ಬಿಸರಳ್ಳಿ ಗ್ರಾಮದಲ್ಲಿ ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದ್ದರಿಂದ ಸಮಸ್ಯೆ ಬಗೆಹರಿಸಲಾಗಿತ್ತು. ಪುನಃ ಸಮಸ್ಯೆಯಾಗಿರುವ ಬಗ್ಗೆ ಬೆಳೂರು ಗ್ರಾಮದ ತುಂಗಭದ್ರಾ ಡ್ಯಾಂ ಹಿನ್ನಿರಿನ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.ನಂತರ ಬಿಸರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಯೊಜನಾಧಿಕಾರಿ, ಪಂಚಾಯತ ರಾಜ್ ಸಹಾಯಕ ನಿರ್ದೇಶಕರು, ನರೇಗಾ ಸಹಾಯಕ ನಿರ್ದೇಶಕರು,SBM ನೋಡಲ್ ಅಧಿಕಾರಿ, ಪಿಡಿಒಗಳು ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರುಗಳು, SBM ಸಮಾಲೋಚಕರು ಹಾಜರಿದ್ದರು.
ಐಇಸಿ ಸಂಯೋಜಕರು ಕೊಪ್ಪಳ