ಬಸವರಾಜ್ ರಾಯರಡ್ಡಿ ಗೆಲುವು ನಿಶ್ಚಿತ,ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲಿದೆ : ಡಾ ಮಲ್ಲಿಕಾರ್ಜುನ ಬಿನ್ನಾಳ್
ಕುಕನೂರು : ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರು ಅಧಿಕ ಮಾರ್ಜಿನ್ ನಿಂದ ಗೆಲುವು ಸಾದಿಸುತ್ತಾರೆ, ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಮತ್ತೆ ಮುಂದುವರೆಯಲಿದೆ ಎಂದು ಕುಕನೂರ್ ತಾಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿನ್ನಾಳ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಹಿನಿಯ ಪ್ರತಿನಿದಿಯೊಂದಿಗೆ ಮಾತನಾಡಿದ ಡಾ. ಮಲ್ಲಿಕಾರ್ಜುನ ಬಿನ್ನಾಳ್ ಅವರು, ನಾಳೆ ನಡೆಯುವ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪ್ರಚಂಡ ವಿಜಯ ಸಾದಿಸಲಿದೆ, ಬಸವರಾಜ್ ರಾಯರಡ್ಡಿ ಅವರು ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತ, ಮತ್ತೆ ಅವರು ಮಂತ್ರಿಯಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ ಎಂದು ಡಾ ಬಿನ್ನಾಳ್ ಹೇಳಿದರು.
ರಾಯರಡ್ಡಿ ಅವರು ಈ ರಾಜ್ಯ ಕಂಡ ಉತ್ತಮ ನೇತಾರರಲ್ಲಿ ಒಬ್ಬರು, ಅಭಿವೃದ್ಧಿ ಹರಿಕಾರರು, ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಅವರು ಮಾಡಿರುವ ಇಂಜಿನಿಯರಿಂಗ್ ಕಾಲೇಜು, ಕೌಶಲ್ಯ ಅಭಿವೃದ್ಧಿ ಕೇಂದ್ರ, ಆಸ್ಪತ್ರೆ ಗಳು, ವಸತಿ ಶಾಲೆಗಳು, ರಸ್ತೆಗಳು, ಹೈ ವೇಗಳು, ಈಗ ಹೊಸದಾಗಿ ರೈಲ್ವೆ ಸೇರಿದಂತೆ ಬೇರೆ ಜಿಲ್ಲೆಯ ನಾಯಕರು, ಇಡೀ ರಾಜ್ಯ ಮೆಚ್ಚುವ ರೀತಿಯಲ್ಲಿ ರಾಯರಡ್ಡಿ ಯವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ಬಸವರಾಜ್ ರಾಯರಡ್ಡಿ ಅಂದರೆ ಅದು ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯದ ಹೆಮ್ಮೆ, ಅವರೊಬ್ಬ ಮುತ್ಸದ್ದಿ ರಾಜಕಾರಿಣಿ ಎಂದು ಡಾ. ಮಲ್ಲಿಕಾರ್ಜುನ ಬಿನ್ನಾಳ್ ಅವರು ರಾಯರಡ್ಡಿ ಅವರ ಕೆಲಸಗಳನ್ನು ಕೊಂಡಾಡಿದರು.
2023 ರ ಚುನಾವಣೆ ಮೊದಲಿನಂತ್ತಿರಲಿಲ್ಲ, ಇಲ್ಲಿ ಹಣದ ಪ್ರಭಾವ ವರ್ಸೆಸ್ ಅಭಿವೃದ್ಧಿ ಮಂತ್ರ ಎರಡೇ ಮಾನ ದಂಡವಾಗಿತ್ತು, ನಾಳೆ ನಡೆಯುವ ಮತ ಎಣಿಕೆ ಯಲ್ಲಿ ರಾಯರಡ್ಡಿ ಅವರು ಪ್ರಚಂಡ ಜಯ ಸಾದಿಸಲಿದ್ದಾರೆ ಎಂದು ಡಾ. ಬಿನ್ನಾಳ್ ಹೇಳಿದರು.