BJP : ಸಂಸದರ ಚುನಾವಣಾ ರಾಜಕೀಯದಿಂದ ನಿವೃತ್ತಿ - ಬಿಜೆಪಿ ಮಾಸ್ಟರ್ ಸ್ಟ್ರೋಕ್ ಬಳಸಿಕೊಳ್ಳುವುದೇ ಕಾಂಗ್ರೆಸ್...?


 ಬಿಜೆಪಿ ಸಂಸದರ ಚುನಾವಣಾ ರಾಜಕೀಯದಿಂದ ನಿವೃತ್ತಿ - ಬಿಜೆಪಿ ಮಾಸ್ಟರ್ ಸ್ಟ್ರೋಕ್ ಬಳಸಿಕೊಳ್ಳುವುದೇ ಕಾಂಗ್ರೆಸ್...?

ಗದಗ : ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ, ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಇದು ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಹಲವು ಮಾನದಂಡಗಳನ್ನಿಟ್ಟು ಹಲವು ಮುಖಂಡರಿಗೆ ಟಿಕೆಟ್ ನಿರಾಕರಿಸಿತ್ತು. ಅದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದೆ. ಈಗ ಲೋಕಸಭೆ ಚುನಾವಣೆ ಎದುರಾಗುತ್ತಿದ್ದಂತೆ, ರಾಜ್ಯದ ಹಲವು ಸಂಸದರು, ಚುನಾವಣೆ ಮುಂಚೆಯೇ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಿದ್ದಾರೆ. 

ರಾಜ್ಯದಲ್ಲಿ ಕೆಲಸ ಮಾಡದ ಸಂಸದರನ್ನ ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲು ಹೋರಟಿದೆ ಬಿಜೆಪಿ. ಲೋಕಸಭೆ ಚುನಾವಣೆಯಲ್ಲಿ ಹಲವು ಬಾರಿ ಸ್ಪರ್ಧಿಸಿದ್ರು, ಹಿರಿಯರಾದ್ರೂ ಸರಿ, ಬಿಜೆಪಿ ಹೈಕಮಾಂಡ್ ಆದೇಶವೇ ಅಂತಿಮ. ಹೈ ಕಮಾಂಡ್ ತುಂಬಾ ಸ್ಟಾಂಗ್ ಆಗಿದ್ದು, ಯಾರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇನ್ನೂ, ಬಹುತೇಕ ಎಲ್ಲ ಸಂಸದರ ಎದೆ ಬಡಿತ ಹೆಚ್ಚಾದಂತೆ ಕಾಣುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದರೆ, ಚುನಾವಣಾ ರಾಜಕೀಯದಿಂದ ನಿವೃತ್ತಿಯಾದಂತೆ ಕಾಣುತ್ತದೆ. ಈ ಮಧ್ಯೆ, ಕರ್ನಾಟಕದ ಮತದಾರ ವಿಧಾನಸಭೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಬೆಂಬಲಿಸಿದ್ರೆ, ಲೋಕಸಭೆ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಮತಹಾಕುತ್ತಾರೆ. ಹೀಗಿರುವಾಗ, ಬಿಜೆಪಿಯಾವ ತಂತ್ರ ಅನುಸರಿಸಲಿದೆ. ಮತ್ತು  ಈ ಅವಕಾಶವನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳಲಿದೆ ಎಂಬುದನ್ನ‌ ಕಾದು ನೋಡಬೇಕು... 

ವರದಿ : KR

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">