Kampli : ಸಾವಿನಲ್ಲೂ ಸಾರ್ಥಕತೆ ಮೆರೆದ ವಿಶಾಲಾಕ್ಷಮ್ಮ ಹಿರೇಮಠ – ಮರಣೋತ್ತರ ನೇತ್ರದಾನ


ಸಾವಿನಲ್ಲೂ ಸಾರ್ಥಕತೆ ಮೆರೆದ ವಿಶಾಲಾಕ್ಷಮ್ಮ ಹಿರೇಮಠ – ಮರಣೋತ್ತರ ನೇತ್ರದಾನ

ಕಂಪ್ಲಿ, ಮಾ.10: ಕಂಪ್ಲಿ ಪಟ್ಟಣದ ವೀರಶೈವ ಜಂಗಮ ಸಮಾಜದ ಪ್ರಮುಖರು, ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಲಿಂ.ಶ್ರೀ ಶ್ರೀ ಶ್ರೀ 1008 ಮರುಳಸಿದ್ಧ ಶಿವಾಚಾರ್ಯರ ಪೂರ್ವಾಶ್ರಮದ ಹಿರಿಯ ಸಹೋದರಿ ಹಾಗೂ ಮಾಧ್ಯಮ ವರದಿಗಾರ ಸಚ್ಚಿದಾನಂದ ಹಿರೇಮಠ ಅವರ ತಾಯಿ ಶ್ರೀಮತಿ ವಿಶಾಲಾಕ್ಷಮ್ಮ ಹಿರೇಮಠ (85) ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಸಾವಿನಲ್ಲೂ ಸಾರ್ಥಕತೆ ಮೆರೆದ ಅವರು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನಿತ್ಯಜ್ಯೋತಿ ನೇತ್ರ ಭಂಡಾರಕ್ಕೆ ಮರಣೋತ್ತರ ನೇತ್ರದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.

ಮೃತರು ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಕಂಪ್ಲಿ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.

ಅವರ ನಿಧನಕ್ಕೆ ಬಂಧು-ಬಳಗ, ಸಮಾಜದ ಮುಖಂಡರು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">