ಜುಲೈ19ರಂದು ಅತಿಥಿ ಶಿಕ್ಷಕರ ಅನಿರ್ದಿಷ್ಟ ಧರಣಿ ನಡೆಯಲಿದೆ .....ಅಯ್ಯಪ್ಪ ನಾಯಕ
ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ)ಬೆಂಗಳೂರು ವತಿಯಿಂದ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಎಚ್ ಎಸ್ ಇವರ ನೇತೃತ್ವದಲ್ಲಿ ಜುಲೈ19 ರಿಂದ ಅನಿರ್ದಿಷ್ಟ ಧರಣಿ ನಡೆಯಲಿದೆ.
ಈ ಅನಿರ್ದಿಷ್ಟಾದಿ ಧರಣಿಯಲ್ಲಿ ಸಿಂಧನೂರು ತಾಲೂಕ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೇವೆ ಮತ್ತು ನಾವು ಕೂಡ ಭಾಗವಹಿಸುತ್ತೇವೆ ಎಂದು ಸಿಂಧನೂರಿನ ತಾಲೂಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕಾ ಅದ್ಯಕ್ಷರಾದ ಅಯ್ಯಪ್ಪ ಎಸ್ ನಾಯಕ ತಿಳಿಸಿದರು.
ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳಾದ ಸೇವಾ ಅನುಭವ ಆಧಾರದ ಮೇಲೆ ನೇಮಕಾತಿ,ಸೇವಾ ಭದ್ರತೆ,ಕೃಪಾಂಕ ವೇತನ ಹೆಚ್ಚಿಸುವ ಕುರಿತು ಹೀಗೆ ಹತ್ತು ಹಲವು ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ) ಕರ್ನಾಟಕ ರಾಜ್ಯಾಧ್ಯಕ್ಷ ಹನುಮಂತ ಎಚ್ ಎಸ್ ನೇತೃತ್ವದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಧರಣಿಯನ್ನು ಜುಲೈ19 ರಿಂದ ನಡೆಸಲಾಗುತ್ತಿದೆ.
*ರಿಪೋರ್ಟರ್ ಮೆಹಬೂಬ ಮೊಮೀನ.*
