ಗುಜ್ಜಳ್ಳಿ ಮತ್ತು ರಾಘವೆಂದ್ರ ಕ್ಯಾಂಪಿನ ನಿವಾಸಿಗಳಿಂದ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ.
ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ವಾರ್ಡ ನಂ10-13 ರಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಮಂಗಳವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣಕ್ಕೆ ಸಂಬಂಧಿಸಿದಂತೆ ಗುಜ್ಜಳ್ಳಿ ಮತ್ತು ರಾಘವೆಂದ್ರ ಕ್ಯಾಂಪಿನಲ್ಲಿ ನಿವಾಸಿಗಳು ಹಲವು ದಿನಗಳಿಂದ ಚರಂಡಿ ಸ್ವಚ್ಛತೆ, ಕಸ ವಿಲೆವಾರಿ ಮತ್ತು ಗುಂಜಳ್ಳಿ ಕ್ಯಾಂಪ್ ನಲ್ಲಿನ ಕುಡಿಯುವ ನೀರಿನ ಕೆರೆಗೆ ಕರೆಂಟ್ ಲೈನ್ ಗಳನ್ನು ಕೆಳಗಡೆ ಹಾಕಿದ್ದು ಇದನ್ನು ಮೇಲಿನ ಕಂಬಗಳಿಗೆ ಹಾಕಿ ಕೊಡುವುದು, ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡುವುದು ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಕೊಡಬೇಕೆಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮರಿಯಪ್ಪ,ನಾಗಪ್ಪ,ಸೋಮಣ್ಣ, ಶಿವರಾಜ,ಎಂ ರಾಮಕೃಷ್ಣ,ಜಿಂದಾಸಾಬ, ಈರಪ್ಪ,ಶಂಕರ,ಜಗದೀಶ,ಹುಲಪ್ಪ,ರಮೇಶ್,ಯಲ್ಲಪ್ಪ, ಇನಿತರರು ಇದ್ದರು.
ರಿಪೋರ್ಟರ್ ಮೆಹಬೂಬ