Turvihal : ಸಂಭ್ರದಿಂದ ಜರುಗಿದ ಮೊಹರಂನ ಕೊನೆದಿನ


ಸಂಭ್ರದಿಂದ ಜರುಗಿದ ಮೊಹರಂನ ಕೊನೆದಿನ

ತುರ್ವಿಹಾಳ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಹರಂ ಹಬ್ಬದ ಕೊನೆಯ ದಿನವಾದ ಶನಿವಾರ ಅಲೈ ದೇವರುಗಳ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.

ಪಟ್ಟಣದ ಮೌಲಾಲಿ ಹಾಗೂ ಮುಲ್ಲಾರ  ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾದ ದೇವರುಗಳ ಮೆರವಣಿಗೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ, ಫಾರೂಕಸಾಬ್. ಗುಂಡಯ್ಯತಾತ. ಚಿದಾನಂದಯ್ಯ ಗುರುವಿನ್. ಜಾಲನೆ ನೀಡಿದರು.              

ನಂತರ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಕೂಡಿ ಸೌಹಾರ್ದತೆಯಿಂದ ಅಲೈ ದೇವರುಗಳ ಹಬ್ಬವನ್ನು ಆಚರಿಸಬೇಕು, ಅಲ್ಲದೆ ಎಲ್ಲರು ಕೈ ಕೈಹಿಡಿದು ಹೆಜ್ಜೆ ಹಾಕುತ್ತಾ ಮೊಹರಂ ಕೊನೆ ದಿನವನ್ನು ಸಂಭ್ರಮದಿಂದ ಆಚರಿಸೋಣ ಎಂದರು.

ಪಟ್ಟಣದ ಹಳೆ ಬಜಾರ್‌ನಲ್ಲಿ ಎರಡೂ ಮಸೀದಿಯ ದೇವರುಗಳ ಸಮಾಗಮದ ದೃಶ್ಯ ನೋಡಲು ಸಾವಿರಾರರು ಜನರು ಸೇರಿದ್ದರು.

ದೇವರುಗಳ ಮುಂದೆ ಅಲೈ ಕುಣಿಯುತ್ತಾ ಕನಕದಾಸ ವೃತ್ತ,ಬಸ್ ನಿಲ್ದಾಣದ ಮೂಲಕ ಈದ್ಗಾ ಮೈದಾನದಲ್ಲಿ ದಫನ್ ಮಾಡಲಾಯಿತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಲ್ಲನಗೌಡ ದೇವರಮನಿ,ಶಾಮಿದಸಾಬಚೌದ್ರಿ.ಮಂಟೆಪ್ಪ ಎಲೆಕೂಡ್ಲಿಗಿ,ಉಮರ್ ಸಾಬ್,ತಿರುಪತೇಪ್ಪ ನಾಯಕ್,ಬಾಪುಗೌಡ ದೇವರಮನಿ,ಸಿರಾಜ್ ಪಾಷಾ ದಳಪತಿ,ಅಬುತರಾಬ್ ಖಾಜಿ,ರಾಜಶೇಖರ ಗಡೆದ,ರಾಮಣ್ಣ ಉಪ್ಪಾರ್,ದೊಡ್ಡಪ್ಪ. ಮಹ್ಮದ ಸಾಬಮೆಸ್ರೀ, ಅಬ್ಬಾಸ್ ಅಲಿಮಕಾಂದಾರ್,ರಶೀದ್ ಸಾಬ್ ಮಕಾಂದಾರ್,ಮೈಬುಬ ಮಕಾಂದಾರ್,ಹಾಗೂ ಪಟ್ಟಣದ ಎಲ್ಲಾ ಸಮಾಜದ ಹಿರಿಯರು ಪಾಲ್ಗೊಂಡಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">