Vanasiri : ಪರಿಸರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವನಸಿರಿ ಫೌಂಡೇಶನ್ ಕಾರ್ಯ ತುಂಬಾ ಶ್ಲಾಘನೀಯ: ಡಾ.ತಾನಾಜಿ ಕಲ್ಯಾಣಕರ್


 ಪರಿಸರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವನಸಿರಿ ಫೌಂಡೇಶನ್ ಕಾರ್ಯ ತುಂಬಾ ಶ್ಲಾಘನೀಯ: ಡಾ.ತಾನಾಜಿ ಕಲ್ಯಾಣಕರ್

ವನಸಿರಿ ಫೌಂಡೇಶನ್ ಮಸ್ಕಿ ವತಿಯಿಂದ ಇಂದು ರಾಯಚೂರಿನ ಸೋಮನಾಥ ಆಸ್ಪತ್ರೆ ವೈದ್ಯರಾದ ಡಾ.ತಾನಾಜಿ ಕಲ್ಯಾಣಕರ್ ಅವರಿಗೆ ವೈದ್ಯರ ದಿನಾಚರಣೆ ಅಂಗವಾಗಿ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಾನಾಜಿ ಕಲ್ಯಾಣಕರ್ ಅವರು ವನಸಿರಿ ಫೌಂಡೇಶನ್ ಜಿಲ್ಲೆಯಲ್ಲಿ ಪರಿಸರಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ ನಾನು ದಿನಾಲು ನೋಡುತ್ತಿದ್ದೇನೆ,ಆಲದ ಮರಕ್ಕೆ ಮರುಜೀವ ನೀಡಿದ್ದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಣೆ ಮಾಡುತ್ತಿರುವುದು, ಬೇಸಿಗೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸುತ್ತಿರುವುದು,ವೈದ್ಯರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆ.ಇಂದು ಅವರು ನಮ್ಮ ಆಸ್ಪತ್ರೆಗೆ ಬಂದು ನಮಗೆ ವೈದ್ಯರ ದಿನಾಚರಣೆಯ ಶುಭಕೋರಿರುವುದು ತುಂಬಾ ಸಂತೋಷದಾಯಕ ಅವರ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ, ಆಸ್ಪತ್ರೆಯ ವೈದ್ಯರಾದ ಡಾ ಕಪಿಲ್ ಕಲ್ಯಾಣಕರ್, ಶಿವುಲೀಲಾ,ಫಾತಿಮಾ, ರುಕ್ಮಿಣಿ,ಪ್ರಮೋದ್,ರಘು, ಮೋಹನ್ ಕುಮಾರ್, ಸುದರ್ಶನ,ಶಕುಂತಲಾ, ಶ್ರೀದೇವಿ,ಜಯಲಕ್ಷ್ಮಿ, ಆಂಜಿನೇಯ ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">