ಸಮುದಾಯ ಹಾಗೂ ಸಮಾಜದ ಬಗ್ಗೆ ಜಾಗೃತಿ ಕಾರ್ಯಕ್ರಮ
ಕಂಪ್ಲಿ :
ಕಂಪ್ಲಿ ಸಮೀಪದ ಎಮ್ಮಿನೂರು ಗ್ರಾಮದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸಂಘ ಕಂಪ್ಲಿ ಘಟಕದ ವತಿಯಿಂದ ಮಾದಿಗ ಸಮುದಾಯ ಯುವಕರಿಗೆ ಜಾಗ್ರತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸಂಘದ ಅಧ್ಯಕ್ಷರಾದ ಶ್ರೀ ಹೆಚ್ ತಿಪ್ಪೇಸ್ವಾಮಿ ರವರು ಮಾತನಾಡಿ, ನಮ್ಮ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡ, "ಶಿಕ್ಷಣ ಎನ್ನುವುದು ಹುಲಿಯ ಹಾಲಿದಂತೆ ಅದನ್ನು ಕುಡಿದನು ಘರ್ಜಿಸಲೇ ಬೇಕು." ಎಂಬ ಡಾ. ಬಿ.ಆರ್. ಅಂಬೇಡ್ಕರ್ ವಾಣಿಯ ಮೂಲಕ ನಮ್ಮ ಸಮುದಾಯವರು ಸಂವಿಧಾನವನ್ನು ದಯಮಾಡಿ ಓದಿ ತಿಳಿದುಕೊಳ್ಳಿ, ಗ್ರಾಮದಲ್ಲಿ ಕಾಲೋನಿಯಲ್ಲಿ ಗ್ರಂಥಾಲಯ ನಿರ್ಮಿಸಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಉತ್ತಮ ಪುಸ್ತಕಗಳನ್ನು ಓದಲು ಅವಕಾಶವನ್ನು ಒದಗಿಸಿಕೊಡಿ. ನಿಮ್ಮ ಸಮಸ್ಯೆಗಳಿಗೆ ನ್ಯಾಯದಲ್ಲಿ ಅನ್ಯಾಯವಾದರೆ ಸಂವಿಧಾನದ ಕಾಯ್ದೆಗಳನ್ನು ಓದಿ ತಿಳಿಸಿದುಕೊಳ್ಳಿ, ಮುಖಂಡರ ಜತೆ ಪೋಲಿಸ್ ಠಾಣೆಗೆ ಹೋಗುವುದು ಕಡಿಮೆ ಮಾಡಿ. ಅನ್ಯಾಯಕ್ಕೆ ಒಳಗಾದವರು ಸಂವಿಧಾನವನ್ನು ತಿಳಿದು, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಮುಂದಾಗಿ ಎಂದು ಅನೇಕ ವಿಚಾರಗಳನ್ನು ತಿಳಿಸಿದರು.
ನಂತರ ಯುವ ಮುಖಂಡ ಹೆಚ್ ಮಲ್ಲೇಶ್ ರವರು ಮಾತನಾಡಿ, "ತನಗಾಗಿ ಕೆಲಸ ಮಾಡುವವರು ಸ್ವಾರ್ಥಿಗಳು, ಇತರರಿಗಾಗಿ ಕೆಲಸ ಮಾಡುವವರು ನಿಸ್ವಾರ್ಥಿಗಳು ಎಂಬ ಸ್ವಾಮಿ ವಿವೇಕಾನಂದರ ವಾಣಿ ಯೊಂದಿಗೆ, ಸ್ವ ಇಚ್ಛೆಯಿಂದ ಶ್ರೀ ಮಾದಾರ ಚೆನ್ನಯ್ಯ ಸಂಘದ ಸದಸ್ಯರಾಗಲು ಒಪ್ಪಿ, ನಮ್ಮ ಸಮುದಾಯವರು ಶಿಕ್ಷಣ, ಅನರಕ್ಷತೆ, ಮೂಡನಂಬಿಕೆ, ಒಗ್ಗಟ್ಟು, ಹಿಂದುಳಿಯಲು ಪ್ರಮುಖ ಕಾರಣವಾಗಿದೆ, ನಮ್ಮ ಸಂಘದ ವತಿಯಿಂದ 18 ರಿಂದ 45 ವರ್ಷದ ವಿದ್ಯಾರ್ಥಿಗಳಿಗೆ ಸ್ಪರ್ಧೆತ್ಮಾಕ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಹೆಚ್ ಪಂಪಾಪತಿ, ಉಪಾಧ್ಯಕ್ಷ ಹೆಚ್ ಮರಿಯಪ್ಪ, ಶ್ರೀನಿವಾಸ್ ಪ್ರಧಾನ ಕಾರ್ಯದರ್ಶಿ ಗೋಪೀನಾಥ್ ಹಾಗೂ ಗ್ರಾ.ಪಂ. ಸದಸ್ಯ ಹೆಚ್.ಎಸ್. ಜಡೇಶ್, ಯುವ ಮುಖಂಡರಾದ ಹೆಚ್ ಜಡೆಪ್ಪ ಮಹೇಶ್, ಚಿದಾನಂದ ಗಂಗಾಧರ ಸೇರಿದಂತೆ ಅನೇಕ ಉಪಸ್ಥಿತರಿದ್ದರು..
ವರದಿ : ಚನ್ನಕೇಶವ
