KRS : ಸುಳ್ಳು ಹೇಳುವುದು ಬಿಡಿ,ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡಿ ನಿರುಪಾದಿ ಗೋಮರ್ಸಿ ಒತ್ತಾಯ


ಸುಳ್ಳು ಹೇಳುವುದು ಬಿಡಿ,ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡಿ ನಿರುಪಾದಿ ಗೋಮರ್ಸಿ ಒತ್ತಾಯ

ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ  ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಇಂದಿನ ಮಟ್ಟಕ್ಕೆ 1624 ಅಡಿಗಳಷ್ಟು ತುಂಬಿದ್ದು ಜಲಾಶಯದ ಎಡದಂಡೆ ಕಾಲುವೆಗೆ ನೀರು ಬಿಡಲು ರಾಜ್ಯ ಸರ್ಕಾರ,ಹಾಗೂ ಸಂಭಂದ ಪಟ್ಟ ಅಧಿಕಾರಿ ವರ್ಗ ಮೀನಮೇಷ ಎಣಿಸುತ್ತಿದೆ,ಇದು ರೈತರ ಆಕ್ರೋಶಕ್ಕೆ ಕಾರಣ ಈಗಾಗಲೇ ಗಂಗಾವತಿ,ಸಿಂಧನೂರು,ಮಸ್ಕಿ, ಮಾನವಿ,ರಾಯಚೂರು ತಾಲೂಕಿನ ಭಾಗದ ರೈತರು ಭತ್ತದ ಸಸಿಗಳನ್ನು ಹಾಕಿದ್ದು ನಾಟಿ ಮಾಡಲು ಅವದಿ ಮುಗಿಯುತ್ತಿದೆ ಈ ಎಲ್ಲ ವಿಷಯವನ್ನು ತಿಳಿದು ಅಧಿಕಾರಿಗಳು ಮೌನ ವಹಿಸಿರುವುದು ಏಷ್ಟು ಸರಿ ಎಂದು ತಿಳಿಸಿದರು.

ಈಗಾಗಲೇ ಕಾಲುವೆಗೆ ನೀರು ಹರಿಸುವ ಸುಳ್ಳು ದಿನಾಂಕಗಳನ್ನು ನೀಡಿ ರೈತರ ತುಟಿಗೆ ತುಪ್ಪ ಸವರುವ ಕೆಲಸವನ್ನು ನಮ್ಮ ಸಚಿವರು,ಶಾಸಕ ವರ್ಗದವರು ಮತ್ತು ಜಲಾಶಯ ಆಡಳಿತ ಮಂಡಲಿಯವರು ಮಾಡುತ್ತಿದ್ದಾರೆ , ಹೋದ ವರ್ಷಕ್ಕೆ ಹೋಲಿಸಿದರೆ ಭತ್ತ ನಾಟಿ ಮಾಡುವುದು ಒಂದು ತಿಂಗಳು ವ್ಯತ್ಯಾಸ ಆಗಿದೆ ಇಡೀ ರಾಜ್ಯಕ್ಕೆ ಗುಣ ಮಟ್ಟದ ಅಕ್ಕಿಯನ್ನು ಒದಗಿಸುವ ಈ ಭಾಗದ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಜಲ ಸಂಪನ್ಮೂಲ ಸಚಿವರು,ನೀರಾವರಿ ಸಚಿವರು,ಉಸ್ತುವಾರಿ ಸಚಿವರು ರಾಜ್ಯ ಸರ್ಕಾರವು ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಎರಡು ಮೂರು ದಿನಗಳಲ್ಲಿ ಜಲಾಶಯದ ಎಡದಂಡೆ ಕಾಲುವೆಗೆ ನೀರು ಬಿಡದಿದ್ದರೆ ಪಕ್ಷದ ವತಿಯಿಂದ,ರೈತ ಸಂಘದ ಕಾರ್ಯಕರ್ತರು ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಚನ್ನಬಸವ ಸೋಮಲಪೂರ,ಶರಣಪ್ಪ ,ಶರಣಪ್ಪ ಗೋರೆಬಾಳ ಹಂಚಿನಾಳ,ಕೃಷ್ಣ ,ದ್ಯವನ್ನ, ಪಕ್ಷದ ಇತರರು ಇದ್ದರು.

ವರದಿ :   ಡಿ ಆಲಂಬಷ

Previous Post Next Post

Contact Form

f="https://unpkg.com/video.js/dist/video-js.css" rel="stylesheet">