Hubli : ಡಾ. ಮೋಹನ್ ಗುರುಸ್ವಾಮಿ ಹುಟ್ಟುಹಬ್ಬದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಡಾ. ಮೋಹನ್ ಗುರುಸ್ವಾಮಿ ಹುಟ್ಟುಹಬ್ಬದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹುಬ್ಬಳ್ಳಿ : 
         ಅಖಿಲ ಕರ್ನಾಟಕ ಅಯ್ಯಪ್ಪ ಸೇವಾ ಸೈನದ ರಕ್ತದಾನಿಗಳ ಬಳಗ ಹಾಗೂ ರೋಟರಿ ಬ್ಲಾಡ್ ಬ್ಯಾಂಕ್ ನೇತೃತ್ವದಲ್ಲಿ ಪರಮ ಪೂಜ್ಯ ಶ್ರೀ ಡಾ. ಕೆ.ಎಂ.ಮೋಹನ್ ಗುರುಸ್ವಾಮಿ ಅವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರದಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

    ರಕ್ತದಾನ ಶಿಬಿರವನ್ನು ಪರಮ ಪೂಜ್ಯ ಶ್ರೀ ಡಾ. ಮೋಹನ್ ಗುರುಸ್ವಾಮಿಗಳ ಆಶೀರ್ವಾದದೊಂದಿಗೆ ಪ್ರಾರಂಭಿಸಿ, ಮಾತನಾಡಿದ ಅವರು ಗುರುಗಳ ಹುಟ್ಟು ಹಬ್ಬ ಪ್ರಯುಕ್ತ ನಮ್ಮ ಶಿಷ್ಯವೃಂದದವರು ಹುಬ್ಬಳ್ಳಿ ಸೇರಿದಂತೆ, ದೂರದ ಊರುಗಳಿಂದ ಬಂದು ರಕ್ತದಾನ ಮಾಡಿ, ಎಷ್ಟೋ ಜೀವಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ, ಈ ಎಲ್ಲ ಶಿಷ್ಯವೃಂದದವರಿಗೆ ಅಖಿಲ ಕರ್ನಾಟಕ ಅಯ್ಯಪ್ಪ ಸೇವಾ ಸೈನ್ಯದ ರಕ್ತದಾನಿಗಳ ಬಳಗದ ವತಿಯಿಂದ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಅನಂತ ಅಭಿನಂದನೆಗಳನ್ನು ಸಲ್ಲಿಸಿ, ಪ್ರತಿಯೊಬ್ಬರಲ್ಲೂ ಚೇತನ ಶಕ್ತಿ ಇದೆ, ಚೇತನದಿಂದ ಚೈತನ್ಯ ಶಕ್ತಿಯನ್ನು ಪಡೆಯಬೇಕು. ಚೈತನ್ಯ ಶಕ್ತಿಯನ್ನು ಒಬ್ಬ ಸುಂದರ ಗುರುಮಾತ್ರ ತಿಳಿಯ ಬಲ್ಲರು, ಈ ಭೂಮಿಯ ಮೇಲೆ ಹುಟ್ಟಿದ ಮಾನವರೆಲ್ಲರೂ ಒಂದೇ. ಯಾವುದೇ ಜಾತಿ, ಮತ, ಭೇದ ಎನ್ನದೇ, ಮಾನವರೆಲ್ಲರೂ ಒಂದೇ ಎಂಬ ಭಾವನೆ ನಿಮ್ಮಲ್ಲಿ ಬೆಳೆಸಿಕೊಳ್ಳುವುದರ ಮೂಲಕ ಮನು ಕುಲಕ್ಕೆ ಜಯವಾಗಲಿ ಎಂದು ತಿಳಿಸಿದರು.

ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್ಮಿಗನೂರು ಸಮೀಪದ ಹೆಚ್.ವೀರಾಪುರ ಮಠದ ಶ್ರೀ ಜಡೇಶ್ ತಾತಾನವರು ಮಾತಾನಾಡಿ, ಇಂತಹ ಸುಂದರ ಗುರುವನ್ನು ಪಡೆದ ನೀವು ತುಂಬಾ ದನ್ಯರು, ಗುರುಗಳ ಸೇವೆಗೆ ನಿಮ್ಮಂತ ಯುವಕರ ಪಾತ್ರ ಮಹತ್ವದ್ದಾಗಿದೆ. ಈ ದಿನ ಮಾಡಿದ ರಕ್ತದಾನ ಮೂರು ಜೀವಗಳಿಗೆ ವರದಾನವಾಗಲಿದೆ.
ಗುರು ಸೇವೆಗಿಂತ ಮಿಗಿಲಾದ ಸೇವೆ ಈ ಜಗತ್ತಿನಲ್ಲಿ ಮಾತ್ತೊಂದಿಲ್ಲ ಎಂದು ತಿಳಿಸಿದರು.

ಬಳಿಕ ರಕ್ತದಾನ ಮಾಡಿದ ಎಲ್ಲ ಶಿಷ್ಯವೃಂದದವರಿಗೆ ಪರಮ ಪೂಜ್ಯ ಶ್ರೀ ಡಾ. ಮೋಹನ್ ಗುರುಸ್ವಾಮಿಗಳು ಹಾಗೂ ಅಖಿಲ ಕರ್ನಾಟಕ ಅಯ್ಯಪ್ಪ ಸೇವಾ ಸೈನ್ಯದ ಶಿಷ್ಯ ವೃಂದದವರು ಸೇರಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗಂಗಾವತಿಯ ತಾತಾಯ್ಯ ಗುರುಸ್ವಾಮಿ, ಶಹಾಪೂರ ಅಶ್ವಿನಿ ಗುರುಸ್ವಾಮಿ, ಹುಬ್ಬಳ್ಳಿ ಗಣೇಶ್ ಗುರುಸ್ವಾಮಿ, ಕುರುಗೋಡು ಗಾಧಿಲಿಂಗಪ್ಪ ಗುರುಸ್ವಾಮಿ, ರುದ್ರಮುನಿ ಸ್ವಾಮಿ ಸೇರಿದಂತೆ ಅನೇಕರು ಶಿಷ್ಯವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">