ಗುಳೇದಗುಡ್ಡ ಮತ್ತು ಕೆರೂರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವವನ್ನು ವಿಜಯದಶಮಿಯ ಅಂಗವಾಗಿ ರವಿವಾರ ಪಥಸಂಚಲನವನ್ನು ಹಮ್ಮಿಕೊಂಡಿತ್ತು
ಈ ಸಮಯದಲ್ಲಿ ನೂರಕ್ಕೂ ಹೆಚ್ಚು ಪುಟ್ಟ ಮಕ್ಕಳು ಗಣವೇಷಧಾರಿಗಳಾಗಿ ಮುಂದೆ ಸಾಗುತ್ತಿರುವುದು ಆಕರ್ಷಕವಾಗಿತ್ತು ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿ ಎಲ್ಲರ ಗಮನ ಸೆಳೆದರು. ಪಥ ಸಂಚಲನ ಮಾರ್ಗದ ಇಕ್ಕೆಲಗಳಲ್ಲಿ ಜನಸ್ತೋಮ ಕಿಕ್ಕಿರಿದು ಜಮಾಯಿಸಿತ್ತು. ಅಲ್ಲಲ್ಲಿ ಅಭಿಮಾನಿಗಳಿಂದ ಪಥಸಂಚಲನ ತಮ್ಮ ಬೀದಿಗೆ ಆಗಮಿಸುತ್ತಿರುವಂತೆ ಪುಷ್ಪವೃಷ್ಠಿಯ ಸುರಿಮಳೆಯನ್ನೆ ಸುರಿಸಿದರು ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದುದು ಕಂಡುಬಂತು ಅಲ್ಲದೆ ಮಹಿಳೆಯರು ಮಕ್ಕಳ ಪಥಸಂಚಲನದ ಹಿನ್ನೆಲೆಯಲ್ಲಿ ಮನೆಗಳ ಮುಂದೆ ದೊಡ್ಡ-ದೊಡ್ಡ ಚಿತ್ತಾಕರ್ಷಕ ಚಿತ್ತಾರದ ರಂಗೋಲಿಗಳನ್ನು ಬಿಡಿಸಿ ಗಣವೇಷಧಾರಿಗಳನ್ನು ಸ್ವಾಗತಿಸುವ ಮೂಲಕ ದೇಶಪ್ರೇಮ ಮೆರೆದರು ಎಲ್ಲೆಲ್ಲೂ ಜೈಶ್ರೀರಾಮ, ಭಾರತಮಾತಾಕಿ ಜೈ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸಾವಿರಾರು ಜನರು ಘಣವೇಷಧಾರಿಗಳಾಗಿ ಭಾಗವಹಿಸಿ ವಾರ್ಷಿಕೊತ್ಸವಕ್ಕೆ ಮೆರುಗು ತಂದು ಜನರಲ್ಲಿ ದೇಶಪ್ರೇಮವನ್ನು ಉಕ್ಕಿಸಿದರು. ಈ ವೇಳೆ ಮಾಜಿ ಶಾಸಕ ರಾಜಶೇಖರ ಶೀಲವಂತರ, ಮಾಲಪಾಣಿ ಇನ್ನೀತರ ಗಣ್ಯರು ಗಣವೇಷಧಾರಿಯಾಗಿ ಭಾಗವಹಿಸಿದ್ದರು. ಪುಟ್ಟ ಮಕ್ಕಳಿಗೆ ಅವರ ತಂದೆ-ತಾಯಿಗಳು ಸ್ವಾತಂತ್ರಕ್ಕಾಗಿ ಹೋರಾಡಿದ ವೀರರ ವೇಷಭೂಷಣಗಳನ್ನು ತೋಡಿಸಿ ಸಂಭ್ರಮಿಸಿದರು.
ವರದಿ : ವೀರೇಶ್