ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಹಲವೆಡೆ ಸೂಲಿಬೆಲೆ ಚಕ್ರವರ್ತಿಯವರ ಜನ ಗಣ ಮನ ಬೆಸೆಯೋಣ ಬೈಕ್ ರ್ಯಾಲಿ
ನಮೋ ಬ್ರಿಗೇಡ್ ಜನ...ಗನ...ಮನ ಬೆಸೆಯೋಣ ಎಂಬ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯಾದ್ಯಂತ ಬೈಕ್ ರ‍್ಯಾಲಿ ನಡೆಸುವ ಮೂಲಕ ಗ್ರಾಮಕ್ಕೆ ಆಗಮಿಸಿದ ಅವರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು
ನರೇಂದ್ರ ಮೋದಿಜೀ ಪ್ರಧಾನಿಯಾದ ಮೇಲೆ ಪಾಕಿಸ್ಥಾನ ಉಸಿರು ಬಿಡಬೇಕಾದ್ರೂ ಕೇಳಬೇಕು ಹಾಗೆ ನಮ್ಮ ದೇಶವನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಪಾಕಿಸ್ಥಾನ
ಸೇರಿದಂತೆ ನೆರೆಯ ದೇಶದವರು ಸಹ ನಮಗೂ ಇಂತ ಪ್ರಧಾನಿ ಬೇಕು ಎನ್ನುವ ಮಟ್ಟಿಗೆ ನಮ್ಮ ಪ್ರಧಾನಿ ಕೆಲಸ ಮಾಡಿದ್ದಾರೆ. ನನ್ನ ದೇಶದ ಜನರಿಗೆ ಸಾಕಷ್ಟು ಯೋಜನೆಗಳನ್ನ ಕೊಟ್ಟು. ದೇಶ ಅಭಿವೃದ್ಧಿ ಮಾಡುತ್ತಿರುವ ನಮ್ಮ ಪ್ರಧಾನಿ ಮೋದಿಜೀಯವರನ್ನ ನಾವು
ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಯಾತ್ರೆಯುದ್ದಕ್ಕೂ ಜನರನ್ನ ಜಾಗೃತಿಗೊಳಿಸುವ ಮೂಲಕ ರಾಜ್ಯಾದ್ಯಂತ ಮೂರುವರೆ ಸಾವಿರ ಕೀಮೀ ಬೈಕ್ ರ‍್ಯಾಲಿ ಮಾಡುವ
ಉದ್ಧೇಶ ಹೊಂದಿದ್ದೆವೆ.
ಬಿಟ್ಟಿ ಬಾಗ್ಯ ಎಂದು ಆತಂಕ ವ್ಯಕ್ತಪಡಿಸಿದ ಸೂಲಿಬೆಲೆ: ಈ ಬಾರಿ ಟ್ರೇನ್ ಫ್ರೀ ಕೊಡ್ತೇವಿ... ಟಿಕೇಟ್
ಫ್ರೀ ಮಾಡ್ತೇವಿ ಅಂತ ಮತ್ತೆ ಮತದಾರರನ್ನ ಓಲೈಸಿ ಅಪ್ಪಿ-ತಪ್ಪಿ ರಾಹುಲ್‌ಗಾಂಧಿಯನ್ನ ಪ್ರಧಾನಿ ಮಾಡ್ಬಿಟ್ರೇ ದೇಶದ ಕಥೆ ಮುಗಿತು ಅಂತ ತಿಳಿದುಕೊಳ್ಳಿ ಎಂದು ಆತಂಕ ವ್ಯಕ್ತಪಡಿಸಿದರು.
ಗ್ಯಾರಂಟಿ ವಿರುದ್ದ ವಾಗ್ದಾಳಿ: ಸದ್ಯದ ಪರಿಸ್ಥಿತಿ ಗಮನಿಸಿದ್ದಿರಾ? ಬಿಟ್ಟಿ ಭಾಗ್ಯ ಕೊಡ್ತೇವಿ ಅಂಥ
ಹೇಳಿ ಎಲ್ಲ ಬಸ್ ಫ್ರೀ ಮಾಡಿದ್ರು ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ನಿತ್ಯ ವಿದ್ಯಾರ್ಥಿಗಳಿಗೆ
ಆಗುತ್ತಿರುವ ತೊಂದರೆ, ಜನರ ನೆಮ್ಮದಿ ಕೆಡಿಸುತ್ತಿರುವ ಸರ್ಕಾರ ನಮಗೆ ಬೇಕಾ? ಕರೆಂಟ್ಫ್ರೀ ಕೊಡೋ ನೆಪದಲ್ಲಿ ಲೋಡ್ ಶೆಡ್ಡಿಂಗ್ ಪ್ರಾರಂಭ ಮಾಡಿದ್ರು. ಗ್ಯಾರಂಟಿ ನೆಪದಲ್ಲಿ
ರಾಜ್ಯದಲ್ಲಾಗುತ್ತಿದ್ದ ಅಭಿವೃದ್ಧಿಯನ್ನ ಸಂಪೂಣ ಸತ್ಯಾನಾಶ ಮಾಡಿದ್ರು ಎಂದು ಭಾಷಣದುದ್ದಕ್ಕೂ ಸರ್ಕಾರದ ಗ್ಯಾರಂಟಿ ವಿರುದ್ಧ ಹರಿಹಾಯ್ದರು.
ಮತ್ತೆ ಅದೇ ತಪ್ಪನ್ನ ಮಾಡಬೇಡಿ ನಾವು ಜಾಗೃತರಾಗಬೇಕು ಎಂದು ಎಚ್ಚರಿಸಿದ ಅವರು ನಮ್ಮ ದೇಶದ ಜೊತೆಗೆ ನಮ್ಮ ರಾಜ್ಯವನ್ನೂ ನಾವು ಕಾಪಾಡಬೇಕಿದೆ. ಕಾರಣ ಮೂರನೆ
ಬಾರಿಗೂ ನರೇಂದ್ರ ಮೋದಿಜೀಯವರನ್ನ ಪ್ರಧಾನಮಂತ್ರಿ ಮಾಡಲೇ ಬೇಕು ಎಂಬ ಹಠತೊಟ್ಟು ರಾಮದುರ್ಗದಿಂದ ಬಬಲೇಶ್ವರದ ವರೆಗೆ ಬೈಕ್ ರ‍್ಯಾಲಿ ಹೊರಟು ಇಂದು ಜನರಲ್ಲಿ
ಜಾಗೃತಿ ಮೂಡಿಸುತ್ತಿದ್ದೆವೆ ಎಂದು ಹೇಳಿದರು.
ನಾವೆಲ್ಲರೂ ಸೇರಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯವರನ್ನಾಗಿ ಮಾಡೋಣ ಎಂದು ಭಾರತ್ ಮಾತಾಕೀ ಜೈ... ಒಂದೇ ಮಾತರಂ ಎಂದು ಜೈಘೋಷ ಹಾಕಿದರು.
ಪಿಜೆಪಿ ಜಿಲ್ಲಾಧ್ಯಕ್ಷ ಶಾಮತಗೌಡ ಪಾಟೀಲ, ಬ್ರಿಗೇಡ್ ಅಧ್ಯಕ್ಷ ಕುಮಾರ ಪವಾಡಶೆಟ್ಟಿ, ಬಸವರಾಜ
ಬೂತಾಳಿ, ಎಸ್ ಎಸ್ ಸುಂಕದ, ಯಲ್ಲಪ್ಪ ಮೇಟಿ, ಬಸವರಾಜ ಹೊಸಮನಿ, ಚನ್ನಬಸು ಮೆಣಸಗಿ ಉಪಸ್ಥಿತರಿದ್ದರು.
ವರದಿ : ಅರುಣ್, ಬಾಗಲಕೋಟೆ