Sindhanur:ಕ್ರೀಡೆಯಿಂದ ದೇಹ ಸದೃಢವಾಗುತ್ತದೆ. ಆರ್ ಸಿದ್ದನಗೌಡ ತುರುವಿಹಾಳ

 

ಕ್ರೀಡೆಯಿಂದ ದೇಹ ಸದೃಢವಾಗುತ್ತದೆ. ಆರ್ ಸಿದ್ದನಗೌಡ ತುರುವಿಹಾಳ

ಪಿ.ಎಸ್.ಎಸ್. ತಾತನವರ ವಸತಿ ಶಾಲೆ, ಗುಂಜಳ್ಳಿಕ್ಯಾಂಪ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಗುಂಜಳ್ಳಿ ವತಿಯಿಂದ ಆಯೋಜಿಸಿದ್ದ ರಾಯಚೂರು ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕೀಯರ ಥ್ರೋಬಾಲ್ ಕ್ರೀಡಾಕೂಟಕ್ಕೆ ಗವಿಸಿದ್ದಯ್ಯ ತಾತನವರು ಬೃಹನ್ಮಠ ಅರಳಹಳ್ಳಿ ಹಾಗೂ ಆರ್.ಸಿದ್ದನಗೌಡ ತುರ್ವಿಹಾಳ ಚಾಲನೆ ನೀಡಿದರು.

ನಂತರ ಆರ್.ಸಿದ್ದನಗೌಡ ತುರ್ವಿಹಾಳ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಓದಿನ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನದ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಚಲಬಿಡದೇ ಸಾಧನೆ ಮಾಡಿದಾಗ ಜೀವನವನ್ನು ರೂಪಿಸಿಕೊಳ್ಳಬಹುದು, ಅದಕ್ಕಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ಜೋತೆಗೆ ಕ್ರೀಡೆಗಳು ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿಗಳ ನಿಜವಾದ ಬೌದ್ಧಿಕ ಮತ್ತು ಮಾನಸಿಕವಾಗಿ ಒಂದಕ್ಕೊಂದು ಪೂರಕವಾಗಿರಬೇಕು ಓದಿನಿಂದ ಜ್ಞಾನವನ್ನು ಬೆಳೆಸಿಕೋಂಡರೆ ಕ್ರೀಡೆಯಿಂದ ದೇಹ ಸದೃಢವಾಗುತ್ತದೆ  ಎಂದು ಹೇಳಿದರು.


ಗವಿಸಿದ್ದಯ್ಯ ತಾತನವರು ಬೃಹನ್ಮಠ ಅರಳಗಳ್ಳಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವಗಳನ್ನು ಬೆಳೆಸಿ ಅವರಿಗೆ ಕ್ರೀಡಾ ಸ್ಪೂರ್ತಿಯನ್ನು ತುಂಬುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತೇಜನ ಹಾಗೂ ಉತ್ಸಾಹ ಮಾಡುವ ಕೆಲಸವನ್ನು ಶಿಕ್ಷಕರುಗಳು ಮಾಡಬೇಕು ಎಂದು ಹೇಳಿದರು.

ಈ ವೇಳೆಯಲ್ಲಿ ಜಿಲ್ಲೆ ಹಾಗೂ ತಾಲೂಕ ವಿವಿಧ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದಿಂದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಲ್ಲಿಕಾರ್ಜುನ, ಜಂಬುಗೌಡ, ಕು.ಸುಜಾತ ಹಾಗೂ ದೈಹಿಕ ಶಿಕ್ಷಕ ಆಂಜನೆಯ ಅವರನ್ನು ಸನ್ಮಾನಿಸಿದರು

ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಕರುಗಳು ಹಾಗೂ ಕ್ರೀಡಾ ಪಟುಗಳು ಭಾಗಿಯಾಗಿದ್ದರು.

*ರಿಪೋರ್ಟರ್ ಮೆಹಬೂಬ ಮೊಮೀನ.*

Previous Post Next Post

Contact Form

f="https://unpkg.com/video.js/dist/video-js.css" rel="stylesheet">