ಕೆ.ಹೊಸಹಳ್ಳಿ ಶಾಲೆಯಲ್ಲಿ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನ ಆಚರಣೆ
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮವದಲ್ಲಿ ಆತಿಥ್ಯವಹಿಸಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವರಾಜ ಹೂಗಾರ ಮಾತನಾಡಿ ಗಾಂಧೀಜಿಯವರ ಜೀವನ ಅತ್ಯಂತ ಸರಳ ಮತ್ತು ಸಜ್ಜನಿಕೆಯಿಂದ ಕೂಡಿತ್ತು. ಅವರ ಸತ್ಯ,ಅಹಿಂಸೆಯ ಮಾರ್ಗ ಇಡೀ ಪ್ರಪಂಚಕ್ಕೆ ಮಾರ್ಗದರ್ಶನವಾಗಿದೆ ಪ್ರತಿಯೊಬ್ಬರೂ ಗಾಂದೀಜಿಯವರಂತೆ ಜೀವನವನ್ನು ಸಾಗಿಸಿದಾಗ ಮಾತ್ರ ನಾವು ಅವರ ಆಶಯಗಳನ್ನು ಈಡೇರಿಸಿದಂತಾಗುತ್ತದೆ.ಅದೇರೀತಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಕೂಡ ಅತ್ಯಂತ ಸರಳ ಜೀವನವನ್ನು ಆರಂಭಿಸಿದವರು,ಇವರು ಶ್ವೇತಕ್ರಾಂತಿಗೆ(ಹಾಲಿನ ಕ್ರಾಂತಿ) ಉತ್ತೇಜನ ನೀಡಿದ್ದಾರೆ,ಜೈ ಜವಾನ್ ಜೈ ಕಿಸಾನ್ (ಸೈನಿಕನಿಗೆ ನಮಸ್ಕಾರ,ರೈತರಿಗೆ ನಮಸ್ಕಾರ)ಎಂಬುದು ಅವರ ಘೋಷವಾಕ್ಯವಾಗಿತ್ತು.ಇವರ ಜೀವನದ ಮೌಲ್ಯಗಳನ್ನು ನಾವುಗಳೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಾಪೂಜಿಯ ಹಾಡುಗಳನ್ನು ಹಾಡಿದರೆ ಆಶಾ ಕಾರ್ಯಕರ್ತೆಯರು ಸ್ವಚ್ಛತೆ ಗ್ರಾಮದ ಸ್ವಸ್ಥ ಕಾಪಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿದರು. ಜೊತೆಗೆ
ಗಾಂಧಿಯವರು ಸತ್ಯ, ಶಾಂತಿ,ಅಹಿಂಸೆಯ ಮಾರ್ಗಗಳನ್ನು ಮಕ್ಕಳೆಲ್ಲರೂ ಪಾಲನೆ ಮಾಡಬೇಕು,ಯಾರೂ ಕೂಡ ಸುಳ್ಳು ಹೇಳಬಾರದು ಸತ್ಯದ ಹಾದಿಯಲ್ಲೇ ಸಾಗಬೇಕು ಎಂದು ಶಿಕ್ಷಕರಾದ ದೊಡ್ಡಪ್ಪ ಅವರು ತಿಳಿಸಿದರು.ನಂತರ ಶಾಲೆಯ ಶಿಕ್ಷಕರೆಲ್ಲರೂ ಗಾಂಧೀಜಿಯ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸ್ವಚ್ಚತಾ ಸೇವಾ ಕಾರ್ಯಕ್ರಮ ನೆರವೇರಿಸಲಾಯಿತು.ನಂತರ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು,ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು,ಆಶಾ ಕಾರ್ಯಕರ್ತೆಯರು,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು,ಅಡುಗೆ ಸಿಬ್ಬಂದಿಗಳು,ವಿದ್ಯಾರ್ಥಿಗಳು ಊರಿನ ಪ್ರಮುಖರು ಉಪಸ್ಥಿತರಿದ್ದರು.