BREAKING : ಬೆಳೆ ನಷ್ಟ ರೈತ ಆತ್ಮಹತ್ಯೆಗೆ ಶರಣು


 BREAKING : ಬೆಳೆ ನಷ್ಟ ರೈತ ಆತ್ಮಹತ್ಯೆಗೆ ಶರಣು

ಬೆಳೆ ನಷ್ಟಗೊಂಡು ಸಾಲ ತೀರಿಸಲು ಆಗದೆ ರೈತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಜರುಗಿದೆ. ದಮ್ಮೂರು ಗ್ರಾಮದ ರೈತ ಮಹಾಂತೇಶ್ (35) ವರ್ಷ ಮೃತ ದುರ್ದೈವಿ ಕುಟುಂಬಸ್ಥರು ಗೌರಿ ಹಬ್ಬದ ನಿಮಿತ್ತ ಗೌರಮ್ಮಗೆ ಆರತಿ ಬೆಳಗಿಕೊಂಡು ಬರಲು ಹೋದ ಸಂದರ್ಭದಲ್ಲಿ ಮನೆಯಲ್ಲಿ ಇರುವ ಪ್ಯಾನ್ ಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಾನೆ. ಮೃತ ಮಹಾಂತೇಶ್ ಗೆ ಪತ್ನಿ ಸೇರಿ ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನಿದ್ದಾನೆ. ರೈತ ಮಹಾಂತೇಶ್ ತಮ್ಮ ತಾಯಿ ಹೆಸರಿನಲ್ಲಿ ಇರುವ 3 ಎಕರೆ ಹಾಗೂ ತಮ್ಮನ 1.50 ಎಕರೆ ಮತ್ತು ಹೆಂಡತಿಯ 1 ಎಕರೆ ಭೂಮಿಯಲ್ಲಿ ಮೆಣಿಸಿನ ಕಾಯಿ ಬೆಳೆ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಹಾಗೂ ಬೆಳೆಗೆ ನೀರು ಸಿಗದ ಪರಿಣಾಮ ಬೆಳೆಗಳು ನಷ್ಟಗೊಂಡಿದ್ದರಿಂದ ಬೆಳೆಗೆ  ಖರ್ಚುಮಾಡಿದ ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡಿದ್ದಾನೆ. ಬೆಳೆಗೆ ಅಂತ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾಯಿ ಹೆಸರಲ್ಲಿ 1.50 ಲಕ್ಷ  ತಮ್ಮನ ಹೆಸರಲ್ಲಿ 70 ಸಾವಿರ ಸೇರಿ ಕೈ ಸಾಲ 10 ಲಕ್ಷ ಮಾಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತ ರೈತನ ಮನೆಗೆ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹಾಗೂ ಶಾಸಕ ಗಣೇಶ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿ ಸರಕಾರದಿಂದ ದೊರಿಯುವ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.ಈ ಕುರಿತು ತಾಯಿ ಶಂಕ್ರಮ್ಮ ನೀಡಿದ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">