Crime : ಅಯೋಧ್ಯಾ ಕ್ರಾಸ್ ಬಳಿ 25 ಕುರಿ ಕಳ್ಳತನ

ಗಂಗಾವತಿ: ತಾಲ್ಲೂಕಿನ ಅಯೋಧ್ಯಾ ಕ್ರಾಸ್ ಬಳಿ ಜಮೀನು ಒಂದರಲ್ಲಿ ಹಾಕಲಾಗಿದ್ದ ಕುರಿ ಹಟ್ಟಿಯಲ್ಲಿ 25 ಕುರಿಗಳನ್ನು ಕಳ್ಳರು ಕಳ್ಕೊಯ್ದಿರುವುದು ಬುಧವಾರ (ಡಿ.13) ಬೆಳಕಿಗೆ ಬಂದಿದೆ.

ಕಳವಾದ ಕುರಿಗಳು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಕ್ಕೋಳ ಗ್ರಾಮದ ಔಡಪ್ಪ ಅವರಿಗೆ ಸೇರಿದ್ದವಾಗಿವೆ ಎಂದು ತಿಳಿದು ಬಂದಿದೆ.

ಕಳೆದ 15 ದಿನಗಳಿಂದ ಅಯೋಧ್ಯಾ ಕ್ರಾಸ್‌ನಲ್ಲಿಯೇ ಔಡಪ್ಪ ಅವರು ಕುರಿಹಟ್ಟಿ ಹಾಕಿದ್ದು, ಮಂಗಳವಾರ (ಡಿ.12) ತಡರಾತ್ರಿ ತಂಡವೊಂದು ಅಯೋಧ್ಯಾ ಕ್ರಾಸ್ ಬಳಿಗೆ ಬಂದು,ಪ್ರಜ್ಞೆ ತಪ್ಪಿಸುವ ಪೌಡರ್ ಕುರಿಗಳಿಗೆ ಹಾಕಿ, ಸದ್ದಿಲ್ಲದೇ ಕುರಿಗಳನ್ನು ಹೊತ್ತೊಯ್ದಿದೆ. ಕುರಿ ಹಟ್ಟಿಯಲ್ಲಿ ಒಟ್ಟು 300 ಕುರಿಗಳಿದ್ದು, ಅವುಗಳಲ್ಲಿ 1 ಟಗರು, 24 ಕುರಿಗಳ ಕಳವು ನಡೆದಿದೆ. 75.50 ಲಕ್ಷ ಬೆಲೆ ಬಾಳುವ ಕುರಿಗಳನ್ನು ಕಳವು ಮಾಡಲಾಗಿದೆ ಎಂದು ಔಡಪ್ಪ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕಾರಟಗಿ, ಶಿರಿಗೇರಿ ಕ್ರಾಸ್‌ನಲ್ಲಿ ಸಹ ಕುರಿಹಟ್ಟಿಯಿಂದ ಕುರಿಗಳ ಕಳ್ಳತನ ಘಟನೆಗಳು ನಡೆದಿದ್ದವು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">