RSS : ಕೋಮು ದ್ವೇಷ ಬಿತ್ತುವ ಉದ್ದೇಶ ಹೇಳಿಕೆ ನೀಡಿರುವ ಕಲ್ಲಡಕ ಬಟ್ಟನ ಬಂಧಿಸುವಂತೆ ಅಪ್ಪಣ್ಣ ಕಾಂಬ್ಳೆ ಆಗ್ರಹ

ಕೋಮು ದ್ವೇಷ ಬಿತ್ತುವ ಉದ್ದೇಶ ಹೇಳಿಕೆ ನೀಡಿರುವ ಕಲ್ಲಡಕ ಬಟ್ಟನ ಬಂಧಿಸುವಂತೆ ಅಪ್ಪಣ್ಣ ಕಾಂಬ್ಳೆ ಆಗ್ರಹ

ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ಉದ್ದೇಶದಿಂದ ಆರ್‌ಎಸ್ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಮಹಿಳೆಯರ ಕುರಿತು ಕೀಳಾಗಿ ಮಾತನಾಡಿರುವುದನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ (AIAWU) ತೀವ್ರವಾಗಿ ಖಂಡಿಸುತ್ತದೆ ಜೊತೆಗೆ ಕ್ರಮಕ್ಕೆ ಒತ್ತಾಯಿಸುತ್ತದೆ ಎಂದು ತಾಲ್ಲೂಕು ಸಂಚಾಲಕ ಅಪ್ಪಣ ಕಾಂಬ್ಳೆ ಆಗ್ರಹಿಸಿದ್ದಾರೆ.

ಮಾತನಾಡಿರುವ ಅವರು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮಾನ್‌ ಸಂಕೀರ್ತನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ  ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ಹೇಳಿ ಮುಸ್ಲಿಂ ಮಹಿಳೆಯರಿಗೆ ಮತ್ತು ಮುಸ್ಲಿಮ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ. 
ಕಲ್ಲಡಕಾ ಪ್ರಭಾಕರ ಭಟ್ಟರು ಸಮಾಜದಲ್ಲಿ ಕೋಮು ದ್ವೇಷ ಹರಡಿಸುತಿದ್ದಾರೆ.ಆದ್ದರಿಂದ ಕಲ್ಲಡಕಾ ಪ್ರಭಾಕರ್ ಭಟ್ಟರನ್ನು ಸಮಾಜದಲ್ಲಿ ಅಶಾಂತಿ ಹರಡುಸುತ್ತಿರುವುದರ ಮತ್ತು ಮುಸ್ಲಿಂ ಹಹಿಳೆಯರಿಗೆ ಅವಮಾನ ಮಾಡಿದ ಹಾಗೂ ಧಾರ್ಮಿಕ ಭಾವನೆಗೆ ದಕ್ಕೆ ತಂದ ಕಾನೂನಿನ ಅಡಿಯಲ್ಲಿ ಕೂಡಲೆ  ದೂರು ದಾಖಲಿಸಿಕೊಂಡು, ಬಂಧಿಸಬೇಕು ಮುಸ್ಲಿಂ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Reported By : Mehaboob Turvihal


Previous Post Next Post

Contact Form

f="https://unpkg.com/video.js/dist/video-js.css" rel="stylesheet">