ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ,. ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
ತುರ್ವಿಹಾಳ, ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಲಯದಲ್ಲಿ ನೂತನ (2024) ವರ್ಷದ ಕ್ಯಾಲೆಂಡರನ್ನು ಸಂಘದ ಅಧ್ಯಕ್ಷರಾದ ಕರಿಲಿಂಗಪ್ಪ ಹಳ್ಳಿ ಬಿಡುಗಡೆಮಾಡಿದರು.
ನಂತರ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೀರೇಶ್ ಎನ್, ಮಾತನಾಡಿ ನಮ್ಮ ಸಂಘವು 47 ವರ್ಷಗಳಿಂದ ಊರಿನ ರೈತರಿಗೆ ಮತ್ತು ಬಡ ವ್ಯಾಪಾರಿಗಳಿಗೆ ಅನೇಕ ರೀತಿಯ ಸಾಲ ಸೌಲಭ್ಯನೀಡುವ ಮೂಲಕ ಸಹಕಾರ ನೀಡುತಾ ಬಂದಿದೆ ಎಂದು ಹೇಳಿದರು.
ಹಾಗೂ ಮಾತನಾಡಿದ ಬಾಪುಗೌಡ ದೇವರಮನಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಊರಿನ ರೈತರಿಗೆ ರಸಗೊಬ್ಬರ ಮತ್ತು ಬಡ ರೈತರಿಗೆ ಸಾಲ ನೀಡುವುದರ ಮೂಲಕ ರೈತರ ಏಳಿಗೆಯನ್ನು ಬಯಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ ಡಿ ಸಿ ಸಿ ತುರ್ವಿಹಾಳ ಶಾಖೆಯ ವ್ಯವಸ್ಥಾಪಕರಾದ ಶಂಕರ ನಾಯ್ಕ ಹಾಗೂ ಸಂಘದ ಉಪಾಧ್ಯಕ್ಷರಾದ ಚಾಂದಪಾಷ ಚೌದ್ರಿ ಮತ್ತು ಸಂಘದ ನಿರ್ದೇಶರಾದ ಮಂಟೆಪ್ಪ ಎಲೆಕೂಡ್ಲಿಗಿ, ದೊಡ್ಡಪ್ಪ ನವಲಹಳ್ಳಿ, ನಾಗಲಿಂಗಪ್ಪ ಘಂಟಿ, ಹೆಚ್ ನಾಗರಾಜ ಶ್ರೇಷ್ಠಿ, ಹಾಗೂ ಊರಿನ ಮುಖಂಡರಾದ ತಿರುಪತೆಪ್ಪ ನಾಯಕ, ಕರಿಯಪ್ಪ ಭಂಗಿ, ನಾಗರಾಜ ಹತಿಗುಡ್ಡ, ಈರಪ್ಪ ಆನೆಗುಂದಿ, ಶೇಖರಪ್ಪ ನಾಗರಬೆಂಚಿ, ಮಾನಪ್ಪ, ವೆಂಕಟೇಶ ಮಡಿವಾಳ ಹಾಗೂ ಸಿಬ್ಬಂದಿಗಳಾದ ಪವನ
ಕುಮಾರ ಬಾಗೋಡಿ, ದಯಾನಂದ ದೇವರಮನಿ, ಬಸವರಾಜ ಆನೆಗುಂದಿ, ಪ್ರಭಾಕರ ಹುಲ್ತಿ, ಶಿವಕುಮಾರ ಹಿರೇಮಠ್, ಗುಳಪ್ಪ ಕುಂಟೋಜಿ,ಹಾಗೂ ಇನ್ನಿತರರು ಇದ್ದರು.
*ರಿಪೋರ್ಟರ್ ಮೆಹಬೂಬ ಮೊಮೀನ.*