ಹಂಪಿ ಉತ್ಸವದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ-HampiUtsava2024


ಮಧುವಣಗಿತ್ತಿಯಂತೆ ಸಿಂಗಾರಗೊಂಡ ಹಂಪಿ ವಿರೂಪಾಕ್ಷನ ಪುಣ್ಯಕ್ಷೇತ್ರ; ಉತ್ಸವಕ್ಕೆ ರೂ14 ಕೋಟಿ ಅನುದಾನ

ಹೊಸಪೇಟೆ: ಹಂಪಿ ಉತ್ಸವಕ್ಕೆ ಹೊಸಪೇಟೆ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫೆ.2ರ ಶುಕ್ರವಾರದಿಂದ ಹಂಪಿ ಉತ್ಸವದ ವೈವಿಧ್ಯತೆ ತೆರೆದುಕೊಳ್ಳಲಿದೆ. ಈ ಬಾರಿ ಹಂಪಿ ಉತ್ಸವಕ್ಕೆ 17.50 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ರೂ ೧೪ ಕೋಟಿ ಮಂಜೂರು ಮಾಡಿದೆ. ಸರ್ಕಾರದ ಕೊಟ್ಟ ಅನುದಾನದಲ್ಲಿ ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜುಗೊಳಿಸಿದೆ.

 ಗುರುವಾರ ಸಿದ್ದಿ ಟಿವಿಯ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ‘ಹಂಪಿ ಉತ್ಸವಕ್ಕೆ ಹೊಸಪೇಟೆಯಿಂದ 80 ಬಸ್‌ಗಳು ನಿರಂತರ ಉಚಿತ ಸೇವೆ ಒದಗಿಸಲಿದ್ದರೆ, ಜಿಲ್ಲೆಯ ಎಲ್ಲಾ 137 ಗ್ರಾಮ ಪಂಚಾಯಿತಿಗಳಿಂದಲೂ ಬಸ್ ಮೂಲಕ ಉಚಿತವಾಗಿ ಜನರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ. ‘ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಗರಿಷ್ಠ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಂಪಿ ಉತ್ಸವದ ಸಿದ್ಧತೆ ಕುರಿತು ವಿವರ ನೀಡಿದರು.

 `ಮಳೆ ಅಭಾವದಿಂದಾಗಿ ಕಮಲಾಪುರ ಕೆರೆಯಲ್ಲಿ ಈ ಸಲ ಸಾಹಸ ಜಲಕ್ರೀಡೆಗಳನ್ನು ನಡೆಸುತ್ತಿಲ್ಲ. ಉಳಿದಂತೆ ಈ ಹಿಂದಿನ ವರ್ಷಗಳಲ್ಲಿ ನಡೆದ ಬಹುತೇಕ ಮನರಂಜನಾ ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರದರ್ಶನಗಳು ಇರಲಿವೆ. ಹಂಪಿಯನ್ನು ಹೆಲಿಕಾಪ್ಟರ್‌ನಿಂದ ನೋಡುವಂತಹ "ಹಂಪಿ ಬೈ ಸ್ಕೈ" ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೆ.2ರಂದು ಬೆಳಿಗ್ಗೆ 10ಕ್ಕೆ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮವಾದ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅದೇ ಹೊತ್ತಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸದ ಕುರಿತು ವಿಚಾರ ಸಂಕೀರ್ಣ ಹಾಗೂ ಕವಿಗೋಷ್ಠಿ ಜರುಗಲಿದೆ. 11ಕ್ಕೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಬೆಂಗಳೂರಿನಿಂದ 50ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಹಂಪಿಗೆ ಬರಲಿರುವ ಜನರು, ಹಂಪಿ ಉತ್ಸವದ ಸಂದೇಶ ಸಾರಲಿದ್ದಾರೆ’ ಎಂದೂ ಮಾಹಿತಿ ನೀಡಿದರು.

ರಾತ್ರಿ 8ಕ್ಕೆ ಚಾಲನೆ `ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ 8 ಗಂಟೆಗೆ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಲವು ಫೂರ್ವ ನಿರ್ಧರಿತ ಕಾರ್ಯಕ್ರಮಗಳು ಇರುವ ಕಾರಣ ಅವರು ಈ ಬಾರಿ ವಿರೂಪಾಕ್ಷನ ದರ್ಶನ ಪಡೆಯುತ್ತಿಲ್ಲ. ಉದ್ಘಾಟನಾ ದಿನ ರಾತ್ರಿ ಪ್ರವೀಣ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ಹಾಗೂ 10ರಿಂದ ವಿಜಯಪ್ರಕಾಶ್ ಮತ್ತು ತಂಡದವರಿಂದ ಸಂಗೀತ ರಸಮಂಜರಿ ಇರಲಿದೆ.

 ಫೆ.3ರಂದು ಹವಾಮ ಕಚೇರಿಯ ಹಿಂಭಾಗ ಬೆಳಿಗ್ಗೆ 10ಕ್ಕೆ ಕುರಿಗಳ ಪ್ರದರ್ಶನ ಇರಲಿದೆ. ಬೆಳಿಗ್ಗೆ 11ಕ್ಕೆ ಹೊಸ ಮಲಪನಗುಡಿಯ ಹತ್ತಿರ ಸಜ್ಜುಗೊಳಿಸಿರುವ ಅಖಾಡದಲ್ಲಿ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಹಾಗೂ ಚಕ್ಕಡಿಯನ್ನು ಬಿಚ್ಚಿ ತೊಡಿಸುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಸಂಜೆಯ ಸಾಂಸ್ಕöತಿಕ ಕಾರ್ಯಕ್ರಮಗಳಲ್ಲಿ ನಟ ದರ್ಶನ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಕೋಲ್ಕೊತ್ತದ ಗೋಲ್ಡನ್ ಗರ್ಲ್ಸ್ ತಂಡದಿಂದ ನೃತ್ಯ, ವೈಜಯಂತಿ ಕಾಶಿ ಅವರಿಂದ ನೃತ್ಯ ರೂಪಕ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ತಂಡದವರಿಂದ ರಸಮಂಜರಿ ನಡೆಯಲಿದೆ.

 ಫೆ.4ರಂದು ಸಂಜೆ 3ಕ್ಕೆ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಜಾನಪದ ವಾಹಿನಿ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಟ ವಿ.ರವಿಚಂದ್ರನ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಆ ದಿನ ರಾಗಿಣಿ ದ್ವಿವೇದಿ, ಸಂಯುಕ್ತಾ ಹೆಗ್ಡೆ, ಅಜಯ್ ರಾವ್ ಸಹಿತ ಹಲವು ಚಲನಚಿತ್ರ ನಟ, ನಟಿಯರು ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದು, ಸಾಧು ಕೋಕಿಲಾ ತಂಡದ ರಸಮಂಜರಿಯೊಂದಿಗೆ ಹಂಪಿ ಉತ್ಸವಕ್ಕೆ ತೆರೆ ಬೀಳಲಿದೆ. ಗಾಯತ್ರಿ ಪೀಠದ ಪ್ರಧಾನ ವೇದಿಕೆಯ ಜತೆಗೆ ಇತರ ಮೂರು ವೇದಿಕೆಗಳಲ್ಲಿ ಹಲವು ಸಾಂಸ್ಕöತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆನೆ ಲಾಯ, ಕುದುರೆ ಲಾಯ ಪ್ರದೇಶದಲ್ಲಿ ವಿಜಯನಗರ ವೈಭವ ಧ್ವನಿ ಬೆಳಕಿನ ಕಾರ್ಯಕ್ರಮ ನಡೆಯಲಿದೆ.ಎರಡು ಸಾವಿರ ಪೊಲೀಸರ ನಿಯೋಜನೆ

 `ಹಂಪಿ ಉತ್ಸವದ ವೇಳೆ ಭದ್ರತಾ ಕಾರ್ಯಗಳಿಗಾಗಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಎರಡು ಸಾವಿರದಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ೪ ಎಎಸ್‌ಪಿ, ೮ ಡಿವೈಎಸ್‌ಪಿ, ೩೨ ಸಿಪಿಐ, ೬೪ ಪಿಎಸ್‌ಐ, ೧೭೦ ಎಎಸ್‌ಐ, ೯೧೪ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು, ೫೦೦ ಗೃಹರಕ್ಷಕ ಸಿಬ್ಬಂದಿ, ೪ ಕೆಎಸ್‌ಆರ್‌ಪಿ, ೨ ಡಿಎಆರ್ ತುಕಡಿಗಳಿಂದ ಭದ್ರತೆ ಒದಗಿಸಲಾಗಿದೆ. ೧೦೦ ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು, ಮಫ್ತಿಯಲ್ಲಿ ೧೧೦ ಪೊಲೀಸರು ಕೆಲಸ ಮಾಡಲಿದ್ದಾರೆ. ೧೫೦ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಇದೇ ಪ್ರಥಮ ಬಾರಿಗೆ ೧೯ ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಮೂರೂ ದಿನ ಸಂಜೆ ಹೊತ್ತು ಕಡ್ಡಿರಾಂಪುರ-ಹAಪಿ-ಕಮಲಾಪುರ ನಡುವೆ ಏಕಮುಖ ಸಂಚಾರ ವ್ಯವಸ್ಥೆ ಇರುತ್ತದೆ. ದೂರದ ವಾಹನ ನಿಲುಗಡೆ ಸ್ಥಳದಿಂದ ಪ್ರಧಾನ ವೇದಿಕೆ, ಮಾತಂತ ಬೆಟ್ಟದವರೆಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಪ್ರಧಾನ ವೇದಿಕೆಯ ಬಳಿ ಪೊಲೀಸರ ಅನುಮತಿ ಪಡೆಯದೆ ಡ್ರೋನ್ ಹಾರಾಟ ನಡೆಸುವಂತಿಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಹಂಪಿಯಲ್ಲಿ ಕಂಪ್ಲಿ ಶಾಸಕರ ಬ್ಯಾನರ್ ಫುಲ್ ಮಿಂಚಿಗೋ ಮಿಂಚಿಗ್..!

ಹಂಪಿ : ಹಂಪ್ಲಿ ಉತ್ಸವ-2024ರ ಹಿನ್ನೆಲೆಯಲ್ಲಿ ಸ್ವಾಗತ ಕೋರಲು ಹಾಕಿದ ಬ್ಯಾನರ್ ಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್.

ಯೆಸ್ ವೀಕ್ಷಕರೇ, ಹಂಪಿಯ ಪ್ರತಿ 10 ಮೀಟರ್ ಗೆ ಒಂದರಂತೆ ಬಹಳಷ್ಟು ಬ್ಯಾನರ್ ಗಳನ್ನು ಹಾಕಿಸಲಾಗಿದೆ, ಅದರಲ್ಲಿ ಹೆಚ್ಚಾಗಿ ಸಚಿವ ಜಮೀರ್ ಅಹ್ಮದ್,  ಸಚಿವ ಬಿ.ನಾಗೇಂದ್ರ,ಗುಜ್ಜಲ ನಾಗರಾಜ್ ಮತ್ತು ಕೈ ಮಗ್ಗ ನಿಗಮದ ಅಧ್ಯಕ್ಷ ಹಾಗೂ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್ ರವರ ಭಾವಚಿತ್ರವಿರುವ ಬ್ಯಾನರ್ ಗಳೇ ಹೆಚ್ಚು.

ನೋಡುಗರಿಗೆ ಒಂದು ಕ್ಷಣ ಜೆ.ಎನ್ ಗಣೇಶ್ ರವರು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರೋ ಅಥವಾ ವಿಜಯನಗರ ಕ್ಷೇತ್ರದ ಶಾಸಕರೋ ಎಂಬಂತೆ ಭಾಸವಾಗುವುದು ಖಚಿತ.

ಮೊದಲು ಕೇವಲ ಕಂಪ್ಲಿ ಮತ್ತು ಕುರುಗೋಡು ಕ್ಷೇತ್ರದಲ್ಲಿ ಅಷ್ಟೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶಾಸಕ ಗಣೇಶ್, ಕರ್ನಾಟಕ ಕೈ ಮಗ್ಗ ನಿಗಮದ ಅಧ್ಯಕ್ಷರಾದ ಬಳಿಕ ಈಗ ರಾಜ್ಯದ ನಾನಾ ಭಾಗಗಳಿಗೆ ಭೇಟಿ ನೀಡಿ ತಮ್ಮ ಕಾರ್ಯ ಸಲ್ಲಿಸುವ ಜವಾಬ್ದಾರಿ ಅವರದ್ದಾಗಿದ್ದರಿಂದ ಈ ಬಾರಿ ಹಂಪಿ ಉತ್ಸವದ ಹಿನ್ನೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗಣೇಶ್ ರವರ ಬ್ಯಾನರ್ ಗಳನ್ನು ಹೆಚ್ಚಾಗಿ ಕಾಣಿಸಿದ್ದಾರೆ.

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">