ಗೋವಿನಾಳ ಗ್ರಾಮ ಚೆಕ್ ಪೋಸ್ಟ್ ನಲ್ಲಿ1.50.000 ಹಣ ಪೊಲೀಸ್ ವಶಕ್ಕೆ
ಲಕ್ಷ್ಮೇಶ್ವರ :ತಾಲೂಕಿನ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಲಕ್ಷ್ಮೇಶ್ವರ ಸರಹದ್ದಿನಲ್ಲಿ ಬರುವ ಗೋವಿನಾಳ ಗ್ರಾಮ ಚೆಕ್ ಪೋಸ್ಟಿನಲ್ಲಿ ಎಸ್ ಎಸ್ ಟಿ ಹಾಗೂ ಪೊಲೀಸ್ ಇಲಾಖೆಯವರು ವಾಹನ ತಪಾಸಣೆ ಮಾಡುವಾಗ 11:45 ಗಂಟೆ ಸುಮಾರಿಗೆ ಕಾರ್ ನಂಬರ್ ಕೆ ಎ 31 ಎನ 5518 ಕ್ರೆಡಾ ಕಾರಿನಲ್ಲಿ 1.50.000 ರು ನಗದು ಯಾವುದೇ ದಾಖಲೆ ಅಲ್ತಾಫ್ ಅಬ್ದುಲ್ಕರಿ ಅಕ್ಕಿಹೊಳೆ ಇವರಿಂದ ಎಸ್ ಎಸ್ ಟಿ ಹಾಗೂ ಪೊಲೀಸರು ತಾಲೂಕ ದಂಡಾಧಿಕಾರಿಗಳು ಉಪಸ್ಥಿತಿಯೊಂದಿಗೆ ಹಣವನ್ನು ಸೀಸ್ ಮಾಡಲಾಗಿದೆ. ಸದರಿ ಮೊತ್ತವನ್ನು ರಜುರಿಗೆ ಹಣ ಸಂಗ್ರಹಿಸಲು ಇಡಲು ನಿಯಮಾನಸಾರ ಸೂಕ್ತ ಕ್ರಮಕ್ಕೆ ಮನವಲಿಸಲು ಮಾನ್ಯರಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಪಿ ಎಸ್ ಐ ಈರಪ್ಪ ರೀತಿ, ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ವರದಿ: ವೀರೇಶ್ ಗುಗ್ಗರಿ