ಮಗಳ ಹುಟ್ಟು ಹಬ್ಬಕ್ಕೆ ಪುಸ್ತಕ ವಿತರಿಸಿದ ವೈದ್ಯ ಮಂಜುನಾಥ-Siddi Tv

ಮಗಳ ಹುಟ್ಟು ಹಬ್ಬಕ್ಕೆ ಆರೋಗ್ಯ ತಪಾಸಣೆ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ನೋಟಬುಕ್‌ ವಿತರಿಸಿದ ವೈದ್ಯ ಮಂಜುನಾಥ..

ತುರ್ವಿಹಾಳ :ಹುಟ್ಟುಹಬ್ಬದ ಆಚರಣೆಗಾಗಿ ಆಡಂಬರಕ್ಕೆ ಹೆಚ್ಚು ಒತ್ತು ನೀಡುವ ಇಂದಿನ ದಿನಮಾನದಲ್ಲಿ ವೈದ್ಯ ಮಂಜುನಾಥ ಅಣಗೌಡರ್ ತಮ್ಮ ಮಗಳಾದ ಅಕ್ಷರಾ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಇಂದಿರಾ ನಗರದ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ ಬುಕ್,ಪೆನ್ ವಿತರಿಸಿದರು. 

ನಂತರ ಮಾತನಾಡಿದ ಡಾ.ಮಂಜುನಾಥ ಅಂದಾನಪ್ಪ ಅಣಗೌಡರ್ ಮಗಳ ಹಟ್ಟುಹಬ್ಬಕ್ಕೆ ಅನಾವಶ್ಯಕ ಖರ್ಚು ಮಾಡದೇ ಇತರರಿಗೆ ಉಪಯೋಗವಾಗುವಂತೆ ಯೋಚಿಸಿ ಇಂತಹ ಕಾರ್ಯಗಳಿಂದ ಮಕ್ಕಳು ಆಸಕ್ತಿ ವಹಿಸಿ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವುದರ, ಜೋತೆ ಮಕ್ಕಳು ಶಾಲೆಯಲ್ಲಿ ಶುಚಿತ್ವ ಕಾಪಾಡಿ ಕೊಳ್ಳಬೇಕು  ಕೈಕಾಲುಗಳ ಸ್ವಚ್ಚತೆಗೆ ಹಾಗೂ ಆಟ ಪಾಠದ ಜೊತೆ ಪಟೆತರ ಚಟುವಟಿಕೆಗಳಲ್ಲಿ ಗಮನ ಹರಿಸಬೇಕು ಎಂದರು. 

ಹಾಗೂ ಮುಖ್ಯೊಪಾಧ್ಯ ದಂಡಪ್ಪ ಹೊಸಮನಿ ಮಾತನಾಡಿ ಹುಟ್ಟುಹಬ್ಬದ ನಿಮಿತ್ಯ ಅರೋಗ್ಯ ತಪಾಸಣೆ, ನೋಟ್ ಬುಕ್ ಮತ್ತು ಪೆನ್ಸಿಲ್ ಎಲ್ಲಾ ಮಕ್ಕಳಿಗೆ ವಿತರಿಸಿದ್ದು ಉಳಿದವರಿಗೆ ಸ್ಫೂರ್ತಿ ದಾಯಕ ಪ್ರತಿಯೊಬ್ಬ ಪಾಲಕ ಪೋಷಕರೇ ತಮ್ಮ ಮಕ್ಕಳ ಹುಟ್ಟು ಹಬ್ಬಗಳನ್ನುನ್ನು ಸರಳವಾಗಿ ಆಚರಿಸಲು ಮುಂದಾಗಬೇಕು ಎಂದು ಹೇಳಿದರು. 

*ರಿಪೋರ್ಟರ್ ಮೆಹಬೂಬ ಮೊಮೀನ.*




Previous Post Next Post

Contact Form

f="https://unpkg.com/video.js/dist/video-js.css" rel="stylesheet">