ಇಂದು 12ನೇ ವಾರ್ಡ್ ಇಂದಿರಾ ನಗರ ನಾಲ್ಕನೇ ಅಂಗನವಾಡಿ ಕೇಂದ್ರ ಕಂಪ್ಲಿಯಲ್ಲಿ ವಿಶ್ವ ಋತುಚಕ್ರದ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಹದಿಹರೆಯದ ಹೆಣ್ಣು ಮಕ್ಕಳಿಂದ ಚಾಲನೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಹಾಗೂ ಮುಟ್ಟಿನ ಕಪ್ಪಿನ ಬಳಿಕೆ ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ,ಹವಾಮಾನ ಬದಲಾವಣೆ ಹಾಗೂ ಮಾನ್ಸೂನ್ ಮಳೆಯ ಪ್ರಯುಕ್ತ ಕಂಡು ಬರಬಹುದಾದ ಕಾಯಿಲೆಗಳ ಬಗ್ಗೆ ಹಾಗೂ ನಿರ್ವಹಣೆ ಬಗ್ಗೆ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಬಿ .ಎಚ್. ಈ. ಓ , ಆರ್ ಕೆ ಎಸ್ ಕೆ ಕೌನ್ಸಲರ್ ,ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : ರಘುವೀರ್, ಸಿದ್ದಿ ಟಿವಿ, ಕಂಪ್ಲಿ : 6360633266