Siruguppa : ಪ್ರೀತಿ ವಿಷ್ಯ ಮನೆಯಲ್ಲಿ ಗೊತ್ತಾಗಿದ್ದಕ್ಕೆ ಓಡಿ ಹೋದ ಹಿಂದೂ-ಮುಸ್ಲಿಂ ಅಪ್ರಾಪ್ತ ಜೋಡಿ!


ಆತ ಹಿಂದೂ ಯುವಕ ಆಕೆ ಮುಸ್ಲಿಂ ಬಾಲಕಿ ಏನೂ ತಿಳಿಯದ ಸಣ್ಣ  ವಯಸ್ಸಿಗೆ ಇಬ್ಬರಿಗೂ ಪ್ರೇಮಾಂಕುರವಾಯ್ತು.  ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಗಾಢವಾಗಿ ಪ್ರೀತಿ ಮಾಡುತ್ತಿದ್ದರು. ಆದರೆ ಅದು ಹೇಗೂ ಇವರಿಬ್ಬರ ಪ್ರೀತಿ ಮನೆಯವರಿಗೆ ಗೊತ್ತಾಗಿ ಹೋಯ್ತು. ಇಬ್ಬರ ಮನೆಯಲ್ಲಿ ಪ್ರೀತಿ ವಿಷಯ ಗೊತ್ತಾಗಿದ್ದೇ ತಡ ಮನೆಯಲ್ಲಿ ಬೈದು ಬುದ್ದಿ ಹೇಳಿದ್ದಾರೆ. ಆದರೆ ಅಷ್ಟಕ್ಕೇ ಸುಮ್ಮನಾಗದ ಈ ಪ್ರಣಯ ಪಕ್ಷಿಗಳು ಈಗ ಮನೆ ಬಿಟ್ಟು ಓಡಿ ಹೋಗಿವೆ. 15 ದಿನದಿಂದ ನಾಪತ್ತೆಯಾಗಿದ್ದು, ಸದ್ಯ ಇವರ ಹುಡುಕಾಟ ನಡೆಯುತ್ತಿದೆ.


ಬಳ್ಳಾರಿ ಜಿಲ್ಲೆ ಸಿರಗುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಈಗ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಪ್ರೀತಿ ವಿಷಯ ಎರಡೂ ಕಡೆ ಮನೆಯವರಿಗೆ  ಗೊತ್ತಾಗುತ್ತಿದಂತೆ ಎಸ್ಕೇಪ್ ಆಗಿದ್ದು, ಹದಿನೈದು ದಿನಗಳ ಹಿಂದೆ ಮನೆಯಿಂದ  ನಾಪತ್ತೆಯಾದವರು ಈವರೆಗೆ ಪತ್ತೆಯಾಗಿಲ್ಲ.

16 ವರ್ಷದ ಮುಸ್ಲಿಂ ಯುವತಿ ಮತ್ತು 20 ವರ್ಷದ ಹಿಂದೂ ಯುವಕ ಎಸ್ಕೇಪ್ ಆಗಿದ್ದು, ಯುವಕನನ್ನು ಪರಮೇಶ  ಎಂದು ಗುರುತಿಸಲಾಗಿದೆ. ಈ ಅಪ್ರಾಪ್ತ ಜೋಡಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ 15 ದಿನದಿಂದ ಪ್ರೇಮಿಗಳು ನಾಪತ್ತೆಯಾದ ಹಿನ್ನೆಲೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಯುವಕ ಪರಮೇಶ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಯುವತಿಯನ್ನ ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಅನ್ಯಕೋಮಿನ ಜೋಡಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">