Kampli : ಮೋಹನ್ ಕುಮಾರ್ ದಾನಪ್ಪರಿಗೆ ಸನ್ಮಾನ


ಮೋಹನ್ ಕುಮಾರ್ ದಾನಪ್ಪರಿಗೆ ಸನ್ಮಾನ

ಕಂಪ್ಲಿ: ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿ ಕಾರದ ಸದಸ್ಯರಾಗಿ ಮೋಹನ್ ಕುಮಾರ್‌ ದಾನಪ್ಪ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದರಿಂದ ಕಂಪ್ಲಿಯ ಕಲ್ಮಠ ಶಾಲೆಯಲ್ಲಿ ಜೊತೆಗೆ ಪ್ರೌಢ ಶಿಕ್ಷಣ ಪಡೆದ ಸ್ನೇಹಿತರು ಹಾಗೂ ಅವರ ಬಾಲ್ಯ ಸ್ನೇಹಿತರು ವಿಶೇಷವಾಗಿ ಸನ್ಮಾನಿಸಿದರು.

ನಂತರ ಸ್ನೇಹಿತರು ಮಾತನಾಡಿ ಯುವಕರಾಗಿದ್ದಾಗಿನಿಂದಲೂ ಹಲವು ರೀತಿಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು ಸಮಾಜದಲ್ಲಿ ಉತ್ತಮವಾದ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಲು ಹೆಚ್ಚು ಹೆಚ್ಚು ಉತ್ತೇಜಿಸುತ್ತಿದ್ದಾರೆ. ಅವರ ಸೇವಾಗುಣ ಆಧರಿಸಿ ಗೃಹ ಇಲಾಖೆ ಈ ನೇಮಕ ಮಾಡಿರುವುದು ಸಂತಸದ ಸಂಗತಿ ಎಂದರು.

ಈ ಸಂದರ್ಭದಲ್ಲಿ ರಮೇಶ್, ಹರ್ಷ, ಕಟ್ಟೆ ಹುಲ್ಲೇಶ್, ಕಟ್ಟೆ ವಿಶ್ವನಾಥ, ರಾಜಶೇಖ‌ರ್, ಇಂದ್ರಜಿತ್ ಸಿಂಗ್, ವಿರೂಪಾಕ್ಷಿ, ತಿಪ್ಪೆಸ್ವಾಮಿ, ವಿನಯ್, ಮನೋಜ್ ಇದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">