Kampli : ಹಳಿ ದಾಟುವಾಗ ರೈಲು ಡಿಕ್ಕಿ: ಮಗು ಸೇರಿ ಇಬ್ಬರ ಸಾವು.!


ಕೊಪ್ಪಳ : ರೈಲ್ವೆ ಹಳಿ ದಾಟುವಾಗ ಮಹಿಳೆ ಮತ್ತು ಎರಡು ವರ್ಷದ ಮಗುಗೆ ರೈಲು ಡಿಕ್ಕಿ ಹೊಡೆದು ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ಹುಲಿಗಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರದ ಶಾರದಮ್ಮ (40) ಹಾಗೂ ಈಕೆಯ ಅಳಿಯ ಕಂಪ್ಲಿಯ ಜ್ಞಾನೇಶ (2) ಎಂದು ಗುರುತಿಸಲಾಗಿದೆ.

ಬಂಧು ಬಳಗದ ಜೊತೆಗೆ ಹರಕೆ ತೀರಿಸಲು ಹುಲುಗಿಯ ಹುಲಿಗೇಮ್ಮ ದೇವಸ್ಥಾನಕ್ಕೆ ಬಂದಿದ್ದರು, ಶಾರದಮ್ಮ ತನ್ನ ಅಳಿಯ ಜ್ಞಾನೇಶ ಶೌಚಕ್ಕೆಂದು ಹಳಿ ದಾಟಿ ಹೋಗಿದ್ದ. ಆತನನ್ನು ವಾಪಸ್ ಕರೆದುಕೊಂಡು ಹಳಿ ದಾಟುವ ಸಂದರ್ಭದಲ್ಲಿ ಗರೀಬ್ ಬಂದೆ ನವಾಜ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ. ರೈಲ್ವೆ ಇಲಾಖೆಯ ಪೊಲೀಸರು ತನಿಖೆ ನಡೆಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">