ಕಾರ್ಮಿಕ ಸಚಿವ ಸಂತೋಷ್ ಲಾಡ್ 50ನೇ ಹುಟ್ಟುಹಬ್ಬ: ವಿಶೇಷ ಚೇತನ ಮಕ್ಕಳೊಂದಿಗೆ ಸಂಭ್ರಮ


ಕಾರ್ಮಿಕ ಸಚಿವ ಸಂತೋಷ್ ಲಾಡ್ 50ನೇ ಹುಟ್ಟುಹಬ್ಬ: ವಿಶೇಷ ಚೇತನ ಮಕ್ಕಳೊಂದಿಗೆ ಸಂಭ್ರಮ

 ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ, ಅವರು ವಿಶೇಷ ಚೇತನ ಮಕ್ಕಳೊಂದಿಗೆ ಸಮಯ ಕಳೆದು, ಅವರೊಂದಿಗೆ ಸಂಭ್ರಮಿಸಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಕಂಪ್ಲಿ ಪುರಸಭಾ ಸದಸ್ಯ ಸಿ.ಆರ್.ಹನುಮಂತ ಹಾಗೂ ಅಭಿಮಾನಿಗಳು ಸಂತೋಷ್ ಲಾಡ್ ರವರಿಗೆ ಶುಭಾ ಕೋರಿ, ವಿಶೇಷವಾಗಿ ಸಂವಿಧಾನ, ಭಾರತ, ಅಂಬೇಡ್ಕರ್ ಹಾಗೂ ಸಂತೋಷ್ ಲಾಡ್ ರವರ ಭಾವಚಿತ್ರಿವಿರುವ ಫ್ರೇಮ್ ನೀಡಿ ಗೌರವಿಸಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ತಾಲ್ಲೂಕಿನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಆಶಾ ಕಾರ್ಯಕರ್ತೆಯರು ಹಾಗೂ ಕೃಷಿ ಸಖಿಯರಿಗೆ ಸಹಾಯಧನ ವಿತರಣೆ ಮಾಡಲಾಯಿತು. ಈ ವೇಳೆ ಸಚಿವರು, "ಸಮಾಜ ಸೇವೆಯೇ ನನಗೆ ಸಂತೋಷ" ಎಂದು ಹೇಳಿಕೊಂಡರು.

ಇನ್ನು, ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಸಮರ್ಥಕರು ರಾಜ್ಯದ ಹಲವೆಡೆ ಅನ್ನದಾನ, ರಕ್ತದಾನ ಶಿಬಿರ ಮತ್ತು ಬಡವರಿಗೆ ವಸ್ತ್ರ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">