Kerala: ಪ್ರಮುಖ ಉದ್ಘೋಷಕ ಕೊಯಂಜೇರಿ ಗೋಪಾಲಕೃಷ್ಣನ್ ನಿಧನ


ಪ್ರಮುಖ ಉದ್ಘೋಷಕ ಕೊಯಂಜೇರಿ ಗೋಪಾಲಕೃಷ್ಣನ್ ನಿಧನ

ಕೇರಳ :ಶಬರಿಮಲೆ ಸನ್ನಿಧಾನಂ ಮುಖ್ಯ ಉದ್ಘೋಷಕ ಹಾಗೂ ಪ್ರಮುಖ ಕಾಂಗ್ರೆಸ್ ನಾಯಕ ಮುರಿಕೇತ್ ವಡಕ್ಕೆತ್ತಿಲ್ ಶ್ರೀ ಎ.ಪಿ.ಗೋಪಾಲಕೃಷ್ಣನ್ ನಾಯರ್ ನಿಧನರಾಗಿದ್ದಾರೆ. 25 ವರ್ಷಗಳಿಂದ ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ಸಲಹೆ ಸೂಚನೆಗಳನ್ನು ಮೈಕ್ ಮೂಲಕ ನೀಡುವ ಮೂಲಕ ಖ್ಯಾತಿ ಗಳಿಸಿದ್ದರು. 

ಶ್ರೀ ಗೋಪಾಲ ಕೃಷ್ಣ ನಾಯರ್ಇವರು ಕೊಯಂಜೇರಿ ಪತ್ತಾನತಿಟ್ಟ ಜಿಲ್ಲೆಯವರಾಗಿದ್ದು,ಇವರು ಸರಿಸುಮಾರು ಸತತ 25 ವರ್ಷಗಳ ಕಾಲ ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಮಲಯಾಳಂ , ತೆಲುಗು  ತಮಿಳು ಸೇರಿದಂತೆ ಮೂರು ಭಾಷೆಯಲ್ಲಿ ಅನೌಸ್ ಮೆಂಟ್ ಮಾಡುತ್ತಿದ್ದರು. ಇವರು ಇಂದು ಎಪ್ರಿಲ್ 30 ರ ಬುಧವಾರದಂದು ಬೆಳಿಗ್ಗೆ ವಯೋಸಹಜ ಆನಾರೋಗ್ಯದ ಕಾರಣದಿಂದ ಮೃತ ಪಟ್ಟಿದ್ದು,

ಇವರ ಅಂತ್ಯಕ್ರಿಯೆಯನ್ನು   ಶುಕ್ರವಾರ ಸಂಜೆ  ಇವರ ಹುಟ್ಟೂರಾದ  ಕೊಯಂಜೆರಿಯಲ್ಲಿ ಪತ್ತಾನತಿಟ್ಟ ಜಿಲ್ಲೆಯಲ್ಲಿ ನೆಡಸಲಾಗುತ್ತದೆ. ಎಂದು ಕುಟುಂಬದ ಸದಸ್ಯರು ತಿಳಿಸಿದರು.

ಇನ್ನೂ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರು ಸಂತಾಪ ಸೂಚಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">