Kampli : ಭಯ ತೊಲಗಿಸಲು ‘ತೆರೆದ ಮನೆ’ ಪಾಠ : ಶಾಲಾ ಮಕ್ಕಳೊಂದಿಗೆ ಕಂಪ್ಲಿ ಪೊಲೀಸ್‌ ಸಿಬ್ಬಂದಿ ಸಂವಾದ


ಭಯ ತೊಲಗಿಸಲು ‘ತೆರೆದ ಮನೆ’ ಪಾಠ : ಶಾಲಾ ಮಕ್ಕಳೊಂದಿಗೆ ಕಂಪ್ಲಿ ಪೊಲೀಸ್‌ ಸಿಬ್ಬಂದಿ ಸಂವಾದ

ಬಳ್ಳಾರಿ / ಕಂಪ್ಲಿ : ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್‌ ಯಾವಾಗ ಬಳಸು ತ್ತೀರಾ, ಕಳ್ಳರು ಹಿಡಿದು ಏನ್‌ ಮಾಡುತ್ತೀರಾ..’

ಇದು ಪೊಲೀಸ್‌ ಇಲಾಖೆಯ ‘ತೆರೆದ ಮನೆ’ ಕಾರ್ಯಕ್ರಮದ ಅಂಗ ವಾಗಿ ನಗರದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿದಾಗ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿಗೆ ಕೇಳಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದರು.

ಪೊಲೀಸ್ ಎಂದರೆ ಸಾಮಾನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್‌ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಸಲು ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. 



ಕಾನೂನು ಸುವ್ಯವಸ್ಥೆಯ ಪಿಎಸ್ಐ ಅವಿನಾಶ ಕಾಂಬ್ಳೆ, ಎಸ್ಐ ಗಳಾದ ಬಿ.  ಬಸವರಾಜ್ ಎಸ್.  ದಿನಕರ ಮಾತನಾಡಿ ಪೊಲೀಸ್‌ ಇಲಾಖೆ ಬಗ್ಗೆ, ‘ಪೊಲೀಸರೆಂದರೆ ಹೆದರಬಾರದು, ಮಕ್ಕಳು ಧೈರ್ಯವಾಗಿ ಮಾತನಾಡಬೇಕು, ಬಾಲ್ಯ ವಿವಾಹ ಮಾಡಲು ಮುಂದಾದರೆ ಮಕ್ಕಳ ಸಹಾಯವಾಣಿ 1098 ಮಕ್ಕಳ  ಸಹಾಯವಾಣಿ , ಶಾಲೆಗಳ ಬಳಿ ಕಿಡಿಗೇಡಿಗಳು ರೇಗಿಸುತ್ತಾರೆ, ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆಯಲು ಏನು ಮಾಡಬೇಕು, ಮತ್ತಿತರ ಉಪಯುಕ್ತ ಮಾಹಿತಿಗಳನ್ನು ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಯಾವುದನ್ನು ಮಾಡಬೇಕು, ಯಾವದನ್ನು ಮಾಡಬಾರದು ಎಂಬುದರ ತಿಳುವಳಿಕೆ ಬಗ್ಗೆ,  ಠಾಣೆಗೆ ಅಥವಾ 112 ವಾಹನಕ್ಕೆ ಕರೆ ಮಾಡಿ ತಿಳಿಸಿ ಕಳ್ಳತನ ಪ್ರಕರಣ, ಮಾದಕ ದ್ರವ್ಯ ವ್ಯಸನದಿಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನು ನೀಡುವ ಗರಿಷ್ಟ ಶಿಕ್ಷಣ ಬಗ್ಗೆ ಅರಿವು ಪೊಲೀಸ್ ಠಾಣೆಯ ಬಂದೂಕು ಗಳ ಬಗ್ಗೆ  ವಿವರವಾದ ಮಾಹಿತಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಹೇಶ, ಸುದರ್ಶನ , ಶೃತಿ ಹಾಗೂ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಬಡಿಗೇರ್ ಜಿಲಾನಸಾಬ್, ಶಿಕ್ಷಕಿಯರಾದ ಅಕ್ಕಮಹಾದೇವಿ, ಸುಧಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">