ಕಂಪ್ಲಿಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಪದಾಧಿಕಾರಿಗಳ ಆಯ್ಕೆ
ಕಂಪ್ಲಿ: ಕಂಪ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಕೋದಂಡರಾಮ ದೇವಾಲಯ ಆವರಣದಲ್ಲಿ ಮೇ 19, ಭಾನುವಾರ ಬೆಳಿಗ್ಗೆ 11 ಗಂಟೆಗೆ ದಲಿತ ಸಂಘರ್ಷ ಸಮಿತಿಯ ತಾಲೂಕು ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆ ನಡೆಯಿತು.
ಈ ಸಭೆಗೆ ರಾಜ್ಯ ಸಂಘಟನಾ ಸಂಚಾಲಕ ಕೆ. ಮಲ್ಲಿಕಾರ್ಜುನ ಮತ್ತು ಕಂಪ್ಲಿ ತಾಲೂಕು ಮಾಜಿ ಸಂಚಾಲಕ ಲಕ್ಷ್ಮೀಪತಿ ಅವರು ನೇತೃತ್ವ ನೀಡಿದರು. ಸಭೆಯ ಸಂದರ್ಭದಲ್ಲಿ ನೂತನ ತಾಲೂಕು ಪದಾಧಿಕಾರಿಗಳನ್ನ ನೇಮಕ ಮಾಡಲಾಯಿತು.
ತಾಲೂಕು ಸಂಚಾಲಕರಾಗಿ ಹೆಚ್. ಗುಂಡಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಮರಿಯಪ್ಪ ಸಣಾಪುರ, ಚಂದ್ರಶೇಖರ ಎಮ್ಮಿಗನೂರು, ಮಹೇಶ ಮೆಟ್ರಿ, ಬಾಳಪ್ಪ ಹೊನ್ನಳ್ಳಿ, ಈರಣ್ಣ ರಾಮಸಾಗರ, ಪಕ್ಕೀರಪ್ಪ ಎಮ್ಮಿಗನೂರು ಹಾಗೂ ಬಾಲು ಶುಗರ್ ಫ್ಯಾಕ್ಟರಿ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ಬಸಪ್ಪ ಮೆಟ್ರಿ, ಹುಲುಗಪ್ಪ ಹಂಪಾದೇವನಹಳ್ಳಿ ಮತ್ತು ಪರಶುರಾಮ ದೇವಲಾಪುರ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.