Ballari : ನಾಳೆ ಬಸ್ ಸಂಚಾರಕ್ಕೆ ವ್ಯತ್ಯಯ ಸಾಧ್ಯತೆ


ಬಳ್ಳಾರಿ: ಮೇ 20 ರಂದು ಬಸ್ ಸಂಚಾರಕ್ಕೆ ವ್ಯತ್ಯಯ – ಸಾರ್ವಜನಿಕರ ಸಹಕಾರಕ್ಕೆ ಕೋರಿಕೆ

ಬಳ್ಳಾರಿ, ಮೇ 19 (ಸಿದ್ಧಿ ಟಿವಿ):

ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಅಂಗವಾಗಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ‘ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ವಿಭಾಗದಿಂದ 225 ಬಸ್ಸುಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ ಈ ಬಸ್‌ಗಳನ್ನು ತಾತ್ಕಾಲಿಕ ಒಪ್ಪಂದದ ಆಧಾರದಲ್ಲಿ ಉಪಯೋಗಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮೇ 20ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡತಿನಿ, ಕಂಪ್ಲಿ ಹಾಗೂ ಸಂಡೂರು ಪ್ರದೇಶಗಳಿಂದ ಪ್ರತಿ ದಿನ ನಿರ್ವಹಿಸಲಾಗುವ ಕೆಲವೊಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ.

ರಾಜ್ಯದ ಮುಖ್ಯಮಂತ್ರಿ ಭಾಗವಹಿಸಲಿರುವ ಈ ಸಮಾರಂಭದಲ್ಲಿ ವಿವಿಧ ಹಕ್ಕುಪತ್ರಗಳು ಹಾಗೂ ಸವಲತ್ತುಗಳ ವಿತರಣೆ ನಡೆಯಲಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಈ ಕಾರ್ಯಕ್ರಮಕ್ಕೆ ಕರೆತರಲಾಗುತ್ತಿದೆ.

ಸಾರ್ವಜನಿಕರು ಈ ತಾತ್ಕಾಲಿಕ ಅಸೌಕರ್ಯಕ್ಕೆ ಸಹಕಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಂಗಳವಾರ ಮಧ್ಯಾಹ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">