Kampli : ಎಮ್ಮಿಗನೂರಲ್ಲಿ ತಡರಾತ್ರಿ ಕಳ್ಳತನ, ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ, ನಗದು ಕಳವು


ಎಮ್ಮಿಗನೂರಲ್ಲಿ ತಡರಾತ್ರಿ ಕಳ್ಳತನ, ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ, ನಗದು ಕಳವು 

ಕಂಪ್ಲಿ:ಕಂಪ್ಲಿ ತಾಲೂಕಿನ ಹಾಗೂ ಕುರುಗೋಡು ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ಎಮ್ಮಿಗನೂರು ಗ್ರಾಮದ ಇಟಗಿ ರಸ್ತೆಯಲ್ಲಿ ಮೇ 29ರ ಗುರುವಾರ ಬೆಳ್ಳಂ ಬೆಳಗ್ಗೆ 4 ಗಂಟೆಯ ಸುಮಾರಿಗೆ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಬಾಪುರ ಬಸವರೆಡ್ಡಿ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದು, ಮನೆಯ ತಿಜೋರಿಯಲ್ಲಿದ್ದ ಸುಮಾರು 2.5 ತೊಲೆ ಬಂಗಾರ, 40 ತೊಲೆ ಬೆಳ್ಳಿ ಹಾಗೂ ₹80,000 ನಗದು ಹಣ ಕಳವು ಮಾಡಿದ್ದಾರೆ.

ಘಟನೆಯ ವೇಳೆ ಮನೆಯವರು ವೈಯಕ್ತಿಕ ಕೆಲಸಕ್ಕಾಗಿ ಬೇರೆ ಊರಿನಲ್ಲಿ ಇದ್ದ ಸಂದರ್ಭದ ಲಾಭ ಪಡೆದು ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕುರಿತು ಕುರುಗೋಡು ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಮುಂದುವರೆದಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">