TB Dam : ದಿನಕ್ಕೊಂದು TMC ಒಳ ಹರಿವು ಹೆಚ್ಚಳ

TB Dam: ಮಲೆನಾಡು ಹಾಗೂ ಮಧ್ಯಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾದರೆ ಯಥೇಚ್ಛ ನೀರು ಹರಿದು ತುಂಬುವ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದಲ್ಲಿ ಇರುವ ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಮಳೆಗಾಲಕ್ಕೆ ಮುನ್ನವೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನಾಲ್ಕೈದು ದಿನಗಳಿಂದ ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ ಹಾಗೂ ವಿಜಯನಗರ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮವಾಗಿ ಅಲ್ಲಿಂದ ಹಳ್ಳ ಕೊಳ್ಳಗಳ ಮೂಲಕ ಹರಿದ ನೀರು ವಿಜಯನಗರ ಜಲಾಶಯವನ್ನು ಸೇರುತ್ತಿದೆ. ಎರಡು ದಿನದಿಂದಲೂ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ 10000 ಕ್ಯೂಸೆಕ್‌ನಷ್ಟಿದೆ. ಎರಡು ದಿನದಲ್ಲೇ ಸುಮಾರು ಎರಡು ಅಡಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು. ಇನ್ನೂ ಹೆಚ್ಚುವ ನಿರೀಕ್ಷೆಯಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">