ರಾಷ್ಟ್ರ ರತ್ನ ": ಎಪಿಜೆ ಅಬ್ದುಲ್ ಕಲಾಂ ರವರ 94ನೇ ಜನ್ಮದಿನ ಆಚರಣೆ ಕಾರ್ಯಕ್ರಮ
ಕಂಪ್ಲಿ 15 ಅಕ್ಟೋಬರ್ : ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನವು ಎಲ್ಲಾ ಭಾರತೀಯರಿಗೆ ಸ್ಫೂರ್ತಿಯ ಶಾಶ್ವತ ಮೂಲವಾಗಿದೆ ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ್ ಸಂಚಾಲಕ ಬಡಿಗೇರ್ ಜಿಲಾನಸಾಬ್ ಹೇಳಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯಂದು ಬುಧವಾರ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಕೋಟೆಯಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಜಯಂತಿಯಲ್ಲಿ ಅಬ್ದುಲ್ ಕಲಾಂ ಜೀ ಅವರ ಭಾವಚಿತ್ರಕ್ಕೆ ಹೃತ್ಪೂರ್ವಕ ಪುಷ್ಪ ನಮನ ಗೌರವ ಸಲ್ಲಿಸಿ ಮಾತಾನಾಡಿ ಅವರ ಜೀವನವು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಶಾಶ್ವತ ಮೂಲವಾಗಿದೆ
ಜ್ಞಾನ, ವಿವೇಕ ಹಾಗೂ ಸರಳತೆಯ ಭಾಗವಾಗಿದ್ದ ಅವರು ವಿಜ್ಞಾನ ಕ್ಷೇತ್ರದಿಂದ ಹಿಡಿದು ರಾಜಕೀಯ ಕ್ಷೇತ್ರದಲ್ಲೂ ಪಾಂಡಿತ್ಯ ಸಾಧಿಸಿದ್ದರು. ಭಾರತದ ಸ್ವಾವಲಂಭಿ ಜ್ಞಾನದ ಪರಿಕಲ್ಪನೆಗೆ ಅಬ್ದುಲ್ ಕಲಾಂ ಅವರು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.ನಂತರ ಮಾತನಾಡಿದ ಟ್ರಸ್ಟ್ ನ ಉಪಾಧ್ಯಕ್ಷ ಎ.ಸಿ. ಯಲ್ಲಪ್ಪ,ಕಲಾಂರವರು ಖ್ಯಾತ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಗಳಾಗಿದ್ದವರು ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವಯುತ ನಮನಗಳು. ಅವರ ದೃಷ್ಟಿಕೋನ ಮತ್ತು ಆಲೋಚನೆಗಳು ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಅವರ ಕೊಡುಗೆಗಳನ್ನು ಅನನ್ಯವಾಗಿದೆ ಎಂದು ಹೇಳಿದರು.
ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕಂಬತ್ ಶ್ವೇತಾ, ವರ್ಷಾ ಮಂಜುಮದರ್, ಆರ್.ಕೆ. ಮುಸ್ಕಾನ್, ಕೊಲ್ಕಾರ ಉಮಾ, ಜೆ. ಅಕ್ಷತಾ, ನಂದಿನಿ, ಗೌಷಿಯಾ, ಮಠದ ಸುನೀತಾ, ಕಂಬತ್ ಕಾವ್ಯಾ ಸೇರಿದಂತೆ ವಿದ್ಯಾರ್ಥಿಗಳು ಪಾಲಕ ಪೋಷಕರು ಉಪಸ್ಥಿತರಿದ್ದರು.