ಮೆಣಸಿನಕಾಯಿ ಬೆಳೆ ಕರಿ ಹೇನು ನಿಯಂತ್ರಣಕ್ಕೆ ರೈತರಿಗೆ ಸಲಹೆ
ಕುರುಗೋಡು, ಅ.19:ಮೆಣಸಿನಕಾಯಿ ಬೆಳೆಗೆ ಕರಿ ಹೇನು ಹುಳುವಿನ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಬೆಳೆ ಸುತ್ತಲೂ ಬೇರೆ ಬೆಳೆಯನ್ನು ಬೆಳೆಸಿ ಲಾಭ ಪಡೆಯಲು ರೈತರಿಗೆ ಕ್ರೀಷ್ಣ (ಝಡ್‌ಎಮ್, ಸಂಸ್ಥೆ) ಕರೆ ನೀಡಿದರು.ಪಟ್ಟಣದ ಬಾದನಹಟ್ಟಿ ರಸ್ತೆಯ ರೈತಮಿತ್ರ ಭವನದಲ್ಲಿ ಕೆಮಿಸೈಡ್ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಕರಿ ಹೇನು ಹಾವಳಿಯಿಂದ ರೈತರಿಗೆ ನಷ್ಟ ಉಂಟಾಗಿದ್ದನ್ನು ಉಲ್ಲೇಖಿಸಿದ ಅವರು, ಈ ವರ್ಷ ನೀಮ್ ಆಯಿಲ್, ಟೇಕ್ ಆಫ್, ಎಫಿಸಿಯಂಟ್ ಮುಂತಾದ ಔಷಧಿಗಳ ಸಿಂಪರಣೆಯ ಮೂಲಕ ಹಾವಳಿಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಬೆಳೆ ಸುತ್ತಲೂ ಬೇರೆ ಬೆಳೆಯನ್ನು ಬೆಳೆಸುವುದರಿಂದ ಉತ್ತಮ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದರು. ತಾಲ್ಲೂಕಿನಲ್ಲಿ ಕೆಮಿಸೈಡ್ ಕಂಪನಿಯ ಎಫಿಸಿಯಂಟ್ ಮತ್ತು ಟೇಕ್ ಆಫ್ ಬಳಸಿ ಲಾಭ ಪಡೆದ ರೈತರ ಅನುಭವವನ್ನೂ ಅವರು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಚಿಕ್ಕೇಗೌಡ, ಡೀಲರ್ ಸುದೀರ್, ಡಿಓ ಸುನೀಲ್ ಅಂಗಡಿ, ಎಸ್.ಓ. ಗಾಧಿಲಿಂಗಪ್ಪ, ಗರ್ಜಪ್ಪ, ಮಹಾಂತೇಶ್ ಸೇರಿದಂತೆ ರೈತರು ಉಪಸ್ಥಿತರಿದ್ದರು.