Kampli: ರಾಮಾಯಣ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಹೆಚ್ ಮರಿಯಪ್ಪ ಕರೆ

ರಾಮಾಯಣ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಹೆಚ್ ಮರಿಯಪ್ಪ ಕರೆ.

ಕಂಪ್ಲಿ :ಮಹರ್ಷಿ ವಾಲ್ಮೀಕಿ ರಾಮಾಯಣ ಮಾನವ ಜನಾಂಗಕ್ಕೆ ಬದುಕುವ ನೈತಿಕತೆಯ ಕೈಗನ್ನಡಿಯಾಗಿದೆ. ಮೇರು ಕೃತಿಯನ್ನು ನೀಡಿದ ವಾಲ್ಮೀಕಿ ಅವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು’ ಎಂದು ಕಂಪ್ಲಿಯ ನಿವೇದಿತಾ ಶಾಲೆಯ ಮುಖ್ಯಗುರು ಹೆಚ್.ಮರಿಯಪ್ಪ ತಿಳಿಸಿದರು.

ಅವರು ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಾನವ ಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಾಯಣದಿಂದ ತಿಳಿದು ಬರುತ್ತದೆ.ಪೋಷಕರು ಮಹಾನ್ ಗ್ರಂಥಗಳನ್ನು ಓದಿ ತಮ್ಮ ಮಕ್ಕಳಿಗೂ ಅದರ ವಿಚಾರಗಳನ್ನು ತಿಳಿಸಬೇಕು. ಮಹಾನ್‌ಪುರುಷರ ಗ್ರಂಥಗಳು ಯುವಜನಾಂಗಕ್ಕೆ ಸ್ಪೂರ್ತಿಯಾಗಿವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ  ಶಾಲೆಯ ಕಾರ್ಯದರ್ಶಿ ಕೆ.ರಾಮು ಮುಖ್ಯ ಶಿಕ್ಷಕಿ ಎಂ.ಪುಪ್ಪ ಸೇರಿದಂತೆ ಎಲ್ಲಾ ಸಹ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">