ದೇವಸಮುದ್ರ ಕೆನಲ್‌ನಲ್ಲಿ ಅನಾಮಧೇಯ ಮಹಿಳೆಯ ಮೃತದೇಹ ಪತ್ತೆ, ವಾರಸುದಾರರ ಪತ್ತೆಗೆ ಮನವಿ
ಕಂಪ್ಲಿ: ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಬಳಿ ಇರುವ ಕೆನಲ್‌ನಲ್ಲಿ ಇಂದು ಅನಾಮಧೇಯ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಸುಮಾರು 55 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದೆ. ಮೃತಳ ದೇಹದ ಮೇಲರ ಕಪ್ಪು ಹಾಗೂ ಗುಲಾಬಿ ಬಣ್ಣದ ಬಟ್ಟೆಯಿದ್ದು, ಮೃತದೇಹವು ಕೆನಲ್ ನೀರಿನಲ್ಲಿ ಹರಿದು ಬಂದಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಕೊಲ್ಡ್ ಸ್ಟೋರೇಜ್ ನಲ್ಲಿ ವಾರಸುದಾರರ ಪತ್ತೆಗಾಗಿ ಇರಿಸಲಾಗಿದೆ.
ಮೃತೆಯ ಗುರುತು ಕುರಿತು ಮಾಹಿತಿ ಇರುವವರು ತಕ್ಷಣವೇ ಕಂಪ್ಲಿ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ ಎಂದು ಕಂಪ್ಲಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.