Kampli: ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಬಿ. ಜಾಫರ್ ಸಾಧಿಕ್


 ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಯೋಜನೆ — ಜಿಲ್ಲಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಬಿ. ಜಾಫರ್ ಸಾಧಿಕ್

ಬಳ್ಳಾರಿ/ಕಂಪ್ಲಿ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಕಂಪ್ಲಿ ಪಟ್ಟಣದ ಕಾಂಗ್ರೆಸ್ ಮುಖಂಡ ಬಿ. ಜಾಫರ್ ಸಾಧಿಕ್ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.ಜಿಲ್ಲಾ ಆಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಧಿಕೃತ ಆದೇಶ ನೀಡಿದೆ.

ಜಾಫರ್ ಸಾಧಿಕ್ ಅವರು ಪ್ರತಿಕ್ರಿಯೆ ನೀಡುತ್ತಾ — “ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸದಾ ಬದ್ಧರಾಗಿರುವ ಹಜ್ ಕಮಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ ಮತ್ತು ಕಂಪ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಜೆ.ಎನ್. ಗಣೇಶ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದರು.
ಈ 15 ಅಂಶಗಳ ಯೋಜನೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ, ವೃದ್ಧಾಪ್ಯ ಸಹಾಯ ಸೇರಿದಂತೆ ಮೂಲಭೂತ ಕಲ್ಯಾಣ ಕ್ಷೇತ್ರಗಳನ್ನು ಒಳಗೊಂಡಿದೆ.
ಅವರು ಮುಂದುವರೆದು — “ಯೋಜನೆಯ ಅನುಷ್ಠಾನದಲ್ಲಿ ನಿಗಾ ವಹಿಸಿ, ಅನುದಾನಗಳ ಪ್ರಾಮಾಣಿಕ ಬಳಕೆ ಹಾಗೂ ಜನಸೇವೆ ಪಾರದರ್ಶಕವಾಗಿ ನಡೆಯುವಂತೆ ಗಮನ ಹರಿಸುತ್ತೇನೆ. ಯಾವುದೇ ಅವ್ಯವಹಾರ ಕಂಡುಬಂದರೆ ಪ್ರಶ್ನೆ ಎತ್ತುವುದು ನನ್ನ ಜವಾಬ್ದಾರಿ” ಎಂದು ತಿಳಿಸಿದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">