ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯಾಧ್ಯಕ್ಷ ಆಯುಷ್ಮಾನ್ ಡಾ. ಆರ್. ಮೋಹನರಾಜ್ ಮತ್ತು ರಾಜ್ಯ ಉಪಾಧ್ಯಕ್ಷ ಆಯುಷ್ಮಾನ್ ರಾಜು ಎಂ. ತಳವಾರ್ ಅವರ ಅನುಮತಿ ಮೇರೆಗೆ, ಇಂದು ಕಂಪ್ಲಿಯ ಪ್ರವಾಸಿ ಮಂದಿರದಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸೋಮು ಛಲವಾದಿ (ವಕೀಲರು) ಅವರ ನೇತೃತ್ವದಲ್ಲಿ ಕಂಪ್ಲಿ ತಾಲೂಕು ಡಿಎಸ್ಎಸ್ (ಭೀಮವಾದ) ಘಟಕ ರಚಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸೋಮಪ್ಪ ಛಲವಾದಿ ವಕೀಲರು, “ಇತ್ತೀಚಿನ ದಿನಗಳಲ್ಲಿ ಹಲವು ಸಂಘಟನೆಗಳು ಸಮುದಾಯದ ಹಿತಕ್ಕಿಂತ ಸ್ವಾರ್ಥದ ಹಿತವನ್ನೇ ಆದ್ಯತೆ ನೀಡುತ್ತಿರುವುದು ನೋವಿನ ಸಂಗತಿ. ಭೀಮವಾದ ಸಂಘಟನೆ ಬಡ ವರ್ಗ, ಸಮುದಾಯ ಮತ್ತು ಹಿಂದುಳಿದವರ ಹಿತಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವುದೇ ನಮ್ಮ ಮೊದಲ ಘೋಷವಾಕ್ಯ” ಎಂದು ತಿಳಿಸಿದರು.
ಸಭೆಯಲ್ಲಿ ಬೈಲೂರು ಮಲ್ಲಿಕಾರ್ಜುನ, ಕಂಪ್ಲಿ ಉಸ್ತುವರಿಯಾದ ವಿರುಪಾಕ್ಷಿ ಕಾಳೆ ಹಾಗೂ ನಾಗೇಂದ್ರ ಬೈಲೂರು ಮುಖ್ಯಸ್ಥರಾಗಿ ಹಾಜರಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದರು.
ಅಧ್ಯಕ್ಷರು: ರಾಮು ಬೆಳಗೋಡು, ಗೌರವ ಅಧ್ಯಕ್ಷರು: ವಾಸು ವಾಲ್ಮೀಕಿ (ಕಂಪ್ಲಿ),ಉಪಾಧ್ಯಕ್ಷರು: ಕೃಷ್ಣ (ಕಂಪ್ಲಿ),ಸಂಘಟನೆ ಸಂಚಾಲಕರು: ವಿರೇಶ್ ಹೊನ್ನಳ್ಳಿ,ಜೊತೆಗೆ — ವಿರೇಶ್ ಸಣಾಪುರ, ನಾಗರಾಜ್ ಬೆಳಗೋಡು, ಬಸವರಾಜ್ ಬೆಳಗೋಡು, ವಿರೇಶ್ ರಾಮಸಾಗರ, ಪುರುಷೋತ್ತಮ್ ಸುಗ್ಗೇನಹಳ್ಳಿ, ರಾಘು ಛಲವಾದಿ ಸೇರಿದಂತೆ ಅನೇಕ ಭೀಮವಾದ ಕಾರ್ಯಕರ್ತರು ಉಪಸ್ಥಿತರಿದ್ದರು.
