ಕಂಪ್ಲಿಗೆ ಲೋಕೋಪಯೋಗಿ ಇಲಾಖೆಯ ಸಿಇ ಭೇಟಿ
ಕಂಪ್ಲಿ: ನವೆಂಬರ್ 13, ಗುರುವಾರ ಮಧ್ಯಾಹ್ನ 12 ಗಂಟೆಗೆ ಲೋಕೋಪಯೋಗಿ ಇಲಾಖೆಯ(ಕಲಬುರಗಿ ವಿಭಾಗೀಯ) ಮುಖ್ಯ ಇಂಜಿನಿಯರ್ (ಸಿಇ) ರವರು ಕಂಪ್ಲಿಗೆ ಭೇಟಿ ನೀಡಿದರು.
ಅವರು ಮೊದಲು ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ವೀಕ್ಷಣೆ ಮಾಡಿ, ಸೇತುವೆಯ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.ನಂತರ ಪ್ರವಾಸಿ ಮಂದಿರವನ್ನು ವೀಕ್ಷಿಸಿ, ಅಗತ್ಯ ಪೀಠೋಪಕರಣಗಳ ಕುರಿತು ಪ್ರಸ್ತಾವನೆ ಈಗಾಗಲೇ ಸಲ್ಲಿಕೆಯಾಗಿದೆ ಎಂದು ತಿಳಿಸಿದರು. ಈ ಕುರಿತು ಶಾಸಕರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Tags
ಟಾಪ್ ನ್ಯೂಸ್

