Kampli: ನಾಳೆ ವಿದ್ಯುತ್ ವ್ಯತ್ಯಯ, ತಾಲೂಕಿನ ಈ ಗ್ರಾಮಗಳಲ್ಲಿ ಕರೆಂಟ್ ಇರಲ್ಲ

ನಾಳೆ ವಿದ್ಯುತ್ ವ್ಯತ್ಯಯ, ತಾಲೂಕಿನ ಈ ಗ್ರಾಮಗಳಲ್ಲಿ ಕರೆಂಟ್ ಇರಲ್ಲ

ಕಂಪ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ಇಟಗಿ 110/11ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ನ.15 ರಂದು  ಬೆಳಿಗ್ಗೆ 09 ಗಂಟೆಯಿAದ ಮಧ್ಯಾಹ್ನ 03 ಗಂಟೆಯವರೆಗೆ ಇಟಗಿ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಸಣಾಪುರ, ಬೆಳಗೋಡುಹಾಳು, ನಂ.2 ಮುದ್ದಾಪುರ, ಅರಳಹಳ್ಳಿ, ಮಾರೆಮ್ಮ ಕ್ಯಾಂಪ್, ಬಸವೇಶ್ವರ ಕ್ಯಾಂಪ್, ಇಟಗಿ ಗ್ರಾಮಗಳ ನಿರಂತರ ಜ್ಯೋತಿ, ಎಫ್4-ಅರಳಹಳ್ಳಿ, ಎಫ್3-ಎಚ್‌ಟಿ (ಎಲ್‌ಐಎಸ್) ಮಾರ್ಗಗಳು ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ನೀರಾವರಿ ವಿದ್ಯುತ್ ಮಾರ್ಗಗಳ ಎಫ್1-ಇಟಗಿ, ಎಫ್2-ತುಂಗಭದ್ರ, ಎಫ್7-ಮಣ್ಣೂರು ಕ್ಯಾಂಪ್, ಎಫ್11-ಮುದ್ದಾಪುರ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ಇಟಗಿ ಉಪಕೇಂದ್ರಕ್ಕೆ ಸಂಬಂದಿಸಿದ ಪಂಪ್‌ಸೆಟ್  ಮಾರ್ಗಗಳ ಬೆಳಿಗ್ಗೆ 04 ಗಂಟೆಯಿAದ 09 ಗಂಟೆಯವರೆಗೆ ಹಾಗೂ ಉಳಿದ 2 ಗಂಟೆ ಸಾಯಂಕಾಲ ವಿದ್ಯುತ್ ಸರಬರಾಜು ಮಾಡಲಾಗುವುದು.

ಸಾರ್ವಜನಿಕರು  ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಜೆಸ್ಕಾಂ ಅನುಮತಿ ಇಲ್ಲದೇ ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಎಂದು ನ.14,ಶುಕ್ರವಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-------------

Previous Post Next Post

Contact Form

f="https://unpkg.com/video.js/dist/video-js.css" rel="stylesheet">